X
ഹോം ടോപ് ലിസ്റ്റിങ്ങ്‌

ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದು ಕಿರುತೆರೆಯಲ್ಲಿ ಕ್ಲಿಕ್ ಆದ ಕನ್ನಡದ ನಟಿಯರಿವರು!

Author: Sowmya Bairappa | Updated: Friday, February 14, 2025, 10:12 AM [IST]

ಸಿನಿಮಾ ನಟರಾಗಬೇಕು, ಬೆಳ್ಳಿತೆರೆಯಲ್ಲಿ ಮಿಂಚಬೇಕು ಎಂದು ಹಲವಾರು ಕಲಾವಿದರ ಆಸೆ. ಹೀಗಾಗಿ, ಪ್ರತಿವರ್ಷ ಅದೆಷ್ಟೂ ಕಲಾವಿದರು ನಾಯಕ ನಟರಾಗಬೇಕು, ನಟಿಯಾಗಬೇಕು ಎಂಬ ಕನಸ್ಸು ಹೊತ್ತು ಚಂದನವನ ಪ್ರವೇಶಿಸುತ್ತಾರೆ. ಈ ಪೈಕಿ ಕೆಲವರಷ್ಟೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಸಕ್ಸಸ್ ಸಿಗದೇ ಕಿರುತೆರೆಗೆ ಎಂಟ್ರಿಕೊಡುತ್ತಾರೆ. ಹೀಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ, ಯಶಸ್ಸು ಪಡೆದ ನಟಿಯರ ಪಟ್ಟಿ ಇಲ್ಲಿದೆ.

Share:
cover image
ದಿವ್ಯಾ ಸುರೇಶ್
1

ನಟಿ ದಿವ್ಯಾ ಸುರೇಶ್ 2017ರಲ್ಲಿ ತೆರೆಕಂಡಿದ್ದ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಡಿಗ್ರಿ ಕಾಲೇಜ್ ಎಂಬ ತೆಲುಗು ಚಿತ್ರ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದರಾದರೂ ಅವು ಗುರುತಿಸಿಕೊಳ್ಳಲಿಲ್ಲ. ಬಳಿಕ ಬಿಗ್‌ ಬಾಸ್ ಕನ್ನಡ ಸೀಸನ್ 8ಕ್ಕೆ ಎಂಟ್ರಿಕೊಟ್ಟರು. ಚಂದನವನದಲ್ಲಿ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಕಿರುತೆರೆ ಪ್ರವೇಶಿಸಿದ ಇವರು, ಸದ್ಯ ತ್ರಿಪುರ ಸುಂದರಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾದರು. 

കൂടുതല്‍ കാണാം


ದೀಪಿಕಾ ದಾಸ್
2

ದೀಪಿಕಾ ದಾಸ್ 2014ರಲ್ಲಿ ಧೂದ್ ಸಾಗರ್ ಎಂಬ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ನಂತರ ತೆಲುಗಿನ 'ಈ ಮನಸೇ' ಚಿತ್ರದಲ್ಲಿ ನಟಿಸಿದರು. ಬಳಿಕ 2016ರಲ್ಲಿ ನಾಗಿಣಿ ಧಾರಾವಾಹಿ ಮೂಲಕ ಕಿರುತೆರೆ ಪಾದರ್ಪಣೆ ಮಾಡಿದರು.  ಈ ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿತು.

കൂടുതല്‍ കാണാം

ಗೌತಮಿ ಜಾದವ್
3

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಗೌತಮಿ ಜಾದವ್, ಕಿರುತೆರೆಗೂ ಬರುವ ಮುನ್ನ 2018ರಲ್ಲಿ ತೆರೆಕಂಡ ಕಿನಾರೆ ಹಾಗೂ ಆದ್ಯ ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಕೆಲ ತೆಲುಗು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದರು. ಆದರೆ, ಇವರಿಗೆ ಖ್ಯಾತಿ ತಂದುಕೊಟ್ಟಿದ್ದು ಕನ್ನಡದ ಸತ್ಯ ಧಾರವಾಹಿ.  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸತ್ಯ' ಸೀರಿಯಲ್‌ನಲ್ಲಿ ಟಾಮ್ ಬಾಯ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. 

കൂടുതല്‍ കാണാം


aishwarya s
4

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ  ಐಶ್ವರ್ಯಾ ಸಿಂಧೋಗಿ ಕೂಡ ಸೀರಿಯಲ್ ಲೋಕಕ್ಕೆ ಎಂಟ್ರಿಕೊಡುವ ಮುನ್ನವೇ ಸಿಂಹಾದ್ರಿ, ಮಟಾಷ್, ಸಂಯುಕ್ತಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ, ಆ ಸಿನಿಮಾಗಳು ಅಷ್ಟು ಹಿಟ್ ಆಗಲಿಲ್ಲ. ಬಳಿಕ ಕಿರುತೆರೆಗೆ ಬಂದ ಐಶ್ವರ್ಯಾ, ನಾಗಿಣಿ 2 ಧಾರವಾಹಿಯಲ್ಲಿ ಮಾಯಾಂಗನೆ ಪಾತ್ರದ ಮೂಲಕ ಜನಪ್ರಿಯತೆ ಪಡೆದರು.  

ವೈಷ್ಣವಿ ಗೌಡ
5

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡದ ಸಿನಿಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ, ಸದ್ಯ ಜೀ ವಾಹಿನಿಯ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು ಗಿರಿಗಿಟ್ಲೆ, ಬೆಕ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರಗಳು ಸಕ್ಸಸ್ ಆಗಲಿಲ್ಲ. ದೇವಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿಕೊಟ್ಟ ಇವರು, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕರ್ನಾಟಕದ ಜನಮನ್ನಣೆ ಪಡೆದರು.



കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+