X
ഹോം ടോപ് ലിസ്റ്റിങ്ങ്‌

ದರ್ಶನ್ ಟು ಯಶ್: ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ ಸ್ಯಾಂಡಲ್‌ವುಡ್ ಸ್ಟಾರ್ ನಟರಿವರು!

Author: Sowmya Bairappa | Published: Friday, July 26, 2024, 12:16 PM [IST]

ಸಿನಿಮಾ ಅಂದ್ರೆನೇ ಮನೋರಂಜನೆ. ಅದರಲ್ಲೂ ಕಾಮಿಡಿ ಸಿನಿಮಾ ಯಾರಿಗೆ ಇಷ್ಟವಾಗಲ್ಲ ಹೇಳಿ. ಕಾಮಿಡಿ ಸಿನಿಮಾ ಮಾಡೋದು ತುಂಬಾನೆ ಕಷ್ಟ, ಆದ್ರೆ ಇದರಲ್ಲಿ ಗೆದ್ದರೆ ಎಲ್ಲದರಲ್ಲೂ ಗೆದ್ದ ಹಾಗೆಯೇ. ಕನ್ನಡದ ಬಹುತೇಕ ನಟರು ಕಾಮಿಡಿ ಕಥಾಹಂದರ ಸಿನಿಮಾಗಳಲ್ಲಿ ನಟಿಸುವ ಮೂಲಕ ನಮ್ಮನ್ನು ನಕ್ಕು ನಲಿಸಿದ್ದಾರೆ. ಇಲ್ಲಿ ಹಾಸ್ಯನಟರನ್ನು ಬಿಟ್ಟು ಕನ್ನಡದ ಈಗಿನ ಯಾವೆಲ್ಲಾ ಸ್ಟಾರ್ ನಟರು ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ.

Share:
cover image
ಉಪೇಂದ್ರ

ಎಲ್ಲದರಲ್ಲೂ ವಿಭಿನ್ನತೆ ಹುಡುಕುವ ರಿಯಲ್ ಸ್ಟಾರ್ ಉಪೇಂದ್ರ ಅವರ ಕಾಮಿಡಿ ಕೂಡ ಕೊಂಚ ಡಿಫರೆಂಟ್. ಇವರು ತಾವು ತ್ರಿಪಾತ್ರದಲ್ಲಿ ನಟಿಸಿರುವ ಹಾಲಿವುಡ್ ಸಿನಿಮಾದಲ್ಲಿ ಕೋತಿ ಕೈಯಲ್ಲಿ ಮಾತನಾಡಿಸೋದು, ರೋಬೋ ಕೈಯಲ್ಲಿ ಮಾತನಾಡಿಸುವುದು ಸಿಕ್ಕಾಪಟ್ಟೆ ಮಜಾ ನೀಡುತ್ತೆ. ಗೌರಮ್ಮ ಸಿನಿಮಾದಲ್ಲೂ ಸಾಕಷ್ಟು ಕಾಮಿಡಿಯಿದೆ. 

കൂടുതല്‍ കാണാം


ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಹೀರೋ ಮಾತ್ರವಲ್ಲ, ಅವರ ಕಾಮಿಡಿ ಟೈಮಿಂಗ್ ಹಾಗೂ ಕಾಮಿಡಿ ಸೆನ್ಸ್ ಕೂಡ ಅದ್ಭುತವಾಗಿದೆ. ದತ್ತ ಸಿನಿಮಾದಲ್ಲಿ ಅವರು ಬಹಳ ಸರಳವಾಗಿ ಕಾಮಿಕ್ ಎಕ್ಸ್‌ಪ್ರೆಶನ್ ನೀಡೋದು, ಕುರಿಗೆ ಬಾಳೆಹಣ್ಣು ತಿನ್ನಿಸುವುದು, ಸ್ಟೇಷನ್ ಬಾಡಿಗೆ ತೆಗೆದುಕೊಳ್ಳೋದು ಎಲ್ಲಾ ಮಸ್ತ್ ಆಗಿತ್ತು. ಈ ಚಿತ್ರದಲ್ಲಿ ದರ್ಶನ್‌ಗೆ ಕೋಮಲ್ ಅವರು ಸಾಥ್ ನೀಡಿದ್ದರು. ಇದರ ಜೊತೆಗೆ ಅನಾಥರು ಸಿನಿಮಾದಲ್ಲೂ ದರ್ಶನ್ ಅದ್ಭುತವಾಗಿ ನಟಿಸಿದ್ದರು. ಇದರಲ್ಲಿ ಸವರು ರಾಧಿಕಾರನ್ನು ಗೋಳಾಡಿಸುವ ಕಾಮಿಡಿ ದೃಶ್ಯಗಳು ಅವರ ಅಭಿಮಾನಿಗಳು ಮರೆಯಲು ಸಾದ್ಯವಿಲ್ಲ. 

കൂടുതല്‍ കാണാം

ಯಶ್

ಮೊದಲು ರಾಕಿಂಗ್ ಸ್ಟಾರ್ ಯಶ್ ಅವರ ಕೈಹಿಡಿದಿದ್ದು ಕಿರಾತಕ ಸಿನಿಮಾ. ಈ ಸಿನಿಮಾದಿಂದಲೇ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡರು. ಇದು ರಿಮೇಕ್ ಸಿನಿಮಾವಾಗಿದ್ದರೂ ಯಶ್ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದರಲ್ಲಿ ಅಣ್ತಮ್ಮ ಎಂಬ ಅವರ ಡೈಲಾಗ್, ಮಂಡ್ಯ ಭಾಷೆ ಎಲ್ಲವೂ ಸಖತ್ ಕಿಕ್ ಕೊಟ್ಟಿತ್ತು. ಯಶ್ ಕಾಮಿಡಿ ಜಾನರ್‌ನಲ್ಲಿ ಮಾಡಿದ ಮತ್ತೊಂದು ಸಿನಿಮಾವೆಂದರೆ ಲಕ್ಕಿ. ಇದರಲ್ಲಿ ರಾಕಿಂಗ್ ಸ್ಟಾರ್ ವಿಭಿನ್ನ ಸ್ಟೈಲ್‌ನಲ್ಲಿ ಗಮನ ಸೆಳೆದಿದ್ದರು. ಇದರ ಜೊತೆಗೆ ರಾಜಾಹುಲಿ ಹಾಗೂ ಗೂಗ್ಲಿ ಸಿನಿಮಾಗಳು ಕೂಡ ಪ್ರೇಕ್ಷಕರಿಗೆ ಸಖತ್ ಮಜಾ ನೀಡಿದ್ದವು. 

കൂടുതല്‍ കാണാം


ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಒಳ್ಳೆಯ ಕಾಮಿಡಿ ಸೆನ್ಸ್ ಇತ್ತು. ಅವರ ಎಲ್ಲಾ ಸಿನಿಮಾಗಳಲ್ಲೂ ಕಾಮಿಡಿಯನ್ನು ಬಳಸಿಕೊಳ್ಳುತ್ತಾರೆ. ಕಾಮಿಡಿ ಜಾನರ್‌ನಲ್ಲಿಯೇ ಅವರ ಸಿನಿಮಾ ಬಂದಿದ್ದು ಕಡಿಮೆಯೇ. ಆದರೆ, ನಮ್ಮ ಬಸವ, ಜಾಕಿ, ಪರಮಾತ್ಮ, ರಾಜ್,ಮೌರ್ಯ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ನಗಿಸಿದ್ದಾರೆ. ಆದರೆ, ಈ ಚಿತ್ರಗಳು ಕಾಮಿಡಿ ಜಾನರ್‌ಗೆ ಫಿಟ್ ಆಗಲ್ಲ. 

കൂടുതല്‍ കാണാം

ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಕಾಮಿಡಿ ಪಾತ್ರಗಳು ಸುಲಭವಾಗಿ ಹೊಂದುತ್ತೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ವಿಷ್ಣುವರ್ಧನ ಸಿನಿಮಾ. ಇದರಲ್ಲಿ ಸುದೀಪ್ ಅವರ ಕಾಮಿಡಿ ಸೆನ್ಸ್ ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. ಅದರಲ್ಲೂ ಸೋನು ಸೂದ್ ಅವರೊಂದಿಗೆ ಫೋನ್ ಸಂಭಾಷಣೆ, ಭಾವನಾ ಅವರನ್ನು ಒಲಿಸಿಕೊಳ್ಳಲು ಮಾಡುವ ಸರ್ಕಸ್ ಎಲ್ಲವೂ ಮಸ್ತ್ ಆಗಿತ್ತು. ಇದನ್ನು ಬಿಟ್ಟರೆ ಕಾಮಣ್ಣನ ಮಕ್ಕಳು ಪಕ್ಕಾ ಕಾಮಿಡಿ ಸಿನಿಮಾ. ಆದರೆ, ಇದು ಸಕ್ಸಸ್ ಕಾಣಲಿಲ್ಲ. ಇದನ್ನು ಬಿಟ್ಟರೆ ರಂಗ ಎಸ್‌ಎಸ್‌ಎಲ್‌ಸಿ, ಕೋಟಿಗೊಬ್ಬ ೨ ಚಿತ್ರಗಳಲ್ಲಿ ಕಿಚ್ಚನ ಕಾಮಿಡಿ ಟೈಮಿಂಗ್ ನೋಡಬಹುದು. 


കൂടുതല്‍ കാണാം


ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೊದಲ ಸಿನಿಮಾ ಚೆಲ್ಲಾಟ. ಇದೊಂದು ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸುತ್ತೆ. ಮುಂಗಾರುಮಳೆ ಸಿನಿಮಾದ ಆರಂಭದಲ್ಲೂ ಕೊಂಚ ಕಾಮಿಡಿ ನೋಡಬಹುದು. ಇದಾದ ಬಳಿಕ ಹುಡುಗಾಟ, ರೋಮಿಯೋ ಹಾಗೂ ಗಾಳಿಪಟ ಸಿನಿಮಾಗಳು ಸಿಕ್ಕಾಪಟ್ಟೆ ಕಾಮಿಡಿ ಕಿಕ್ ನೀಡುತ್ತವೆ. ಅದರಲ್ಲೂ ಗಾಳಿಪಟ ಚಿತ್ರದಲ್ಲಿ ಗಣೇಶ್ ಹೊಡೆಯೋ ಡೈಲಾಗ್ ಇಂದಿಂಗೂ ಟ್ರೆಂಡಿಂಗ್‌ನಲ್ಲಿವೆ. ಒಟ್ಟಿನಲ್ಲಿ ಗಣೇಶ್ ಅವರಿಗೆ ಕಾಮಿಡಿ ಪಾತ್ರ ನೀರು ಕುಡಿದಷ್ಟೇ ಸುಲಭ ಅಂದ್ರೆ ತಪ್ಪಾಗಲ್ಲ. 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+