X
ഹോം ടോപ് ലിസ്റ്റിങ്ങ്‌

ಒಂದು ಕಾಲದಲ್ಲಿ ದೊಡ್ಡ ಹಿಟ್ ಕೊಟ್ಟ ಈ ನಿರ್ದೇಶಕರ ಕಂಬ್ಯಾಕ್ ಯಾವಾಗ?

Author: Sowmya Bairappa | Updated: Monday, July 29, 2024, 10:08 AM [IST]

ಕಳೆದ ಎರಡು ವರ್ಷಗಳಿಂದ ನಿಂತ ನೀರಾಗಿದೆ. ಒಂದು ಕಾಲದಲ್ಲಿ ಚಂದನವನಕ್ಕೆ ದೊಡ್ಡ ಹಿಟ್ ಕೊಟ್ಟ ನಿರ್ದೇಶಕರ ಸಿನಿಮಾಗಳು ಇತ್ತೀಚೆಗೆ ಸೋಲುತ್ತಿವೆ. ಅಂದು ಸದಾ ವಿಭಿನ್ನತೆ, ಹೊಸತನದಿಂದ ಕೂಡಿರುತ್ತಿದ್ದ ಇವರ ಸಿನಿಮಾವನ್ನು ಜನರು ತುಂಬಾ ಇಷ್ಟಪಡುತ್ತಿದ್ದರು. ಆದ್ರೀಗ, ಇವರು ಚಿತ್ರಗಳು ಸೋಲಲು ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಇಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಹೋಪ್ ಕೊಟ್ಟ ನಿರ್ದೇಶಕರ ಸೋಲಿಗೆ ಮುಂದಿನ ಸಿನಿಮಾಗಳ ಮಾಹಿತಿ ನೀಡಲಾಗಿದೆ.

Share:
cover image
ಯೋಗರಾಜ್ ಭಟ್

ಕನ್ನಡ ಚಿತ್ರರಂಗದ ವಿಕಟಕವಿ ಯೋಗರಾಜ್‌ ಭಟ್ ಸಿನಿಮಾಗಳು ಅವರದ್ದೇ ಆದ ಒಂದು ಶೈಲಿಯಲ್ಲಿರುತ್ತವೆ. ಇವರಿಗೆ ಗೆಲವು ತಂದುಕೊಟ್ಟಿದ್ದು ಮುಂಗಾರುಮಳೆ. ಈ ಸಿನಿಮಾ ಇಡೀ ಸಿನಿಮಾತಂಡ ಲೈಫ್ ಚೇಂಜ್ ಮಾಡಿದೆ ಅಂದರೆ ತಪ್ಪಾಗಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಚಿತ್ರ ಮುಂಗಾರುಮಳೆ. ಇದಾದ ಬಳಿಕ ಬಂದ ಗಾಳಿಪಟ, ಮನಸಾರೆ, ಪಂಚರಂಗಿ, ಡ್ರಾಮಾ, ಪರಮಾತ್ಮವರೆಗೂ ಎಲ್ಲಾ ಚಿತ್ರಗಳು ಪ್ರೇಕ್ಷಕರ ಮನಗೆದ್ದವು. ಈ ಎಲ್ಲಾ ಚಿತ್ರಗಳಲ್ಲೂ ಒಂದು ರೀತಿಯ ಹೊಸತನವಿತ್ತು. ಇವರ ಸಿನಿಮಾದ ಹಾಡುಗಳು, ಡೈಲಾಗ್ ಹಿಟ್ ಆಗುತ್ತಿದ್ದವು. ಇದಾದ ಬಳಿಕ ಮುಗುಳುನಗೆ ಹಾಗೂ ಗಾಳಿಪಟ ೨ ಚಿತ್ರಗಳು ತಕ್ಕಮಟ್ಟಿನ ಯಶಸ್ಸು ನೀಡಿದ್ದವು. ಇದಾದ ನಂತರ ಬಂದ ವಾಸ್ತುಪ್ರಕಾರ, ಪಂಚತಂತ್ರ, ಗರಡಿ, ಕರಟಕ ದಮನಕ ಚಿತ್ರಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದು, ಭಟ್ಟರು ತಮ್ಮ ಮುಂದಿನ ಸಿನಿಮಾದಲ್ಲಿ ಕಂಬ್ಯಾಕ್ ಮಾಡಲಿದ್ದಾರಾ? ಎಂಬುದನ್ನು ಕಾದುನೋಡಬೇಕು.

കൂടുതല്‍ കാണാം


ದುನಿಯಾ ಸೂರಿ

ಮುಂಗಾರುಮಳೆ ಟೈಮ್‌ನಲ್ಲೇ ರಿಲೀಸ್ ಆದ ಮತ್ತೊಂದು ಹೊಸ ಅಲೆಯ ಸಿನಿಮಾ ದುನಿಯಾ. ಸೂರಿಯವರಂತಹ ಸೃಜನಶೀಲ ನೀರ್ದೇಶಕರನ್ನ ಹಾಗೂ ವಿಜಯ್ ಅವರಂತಹ ಆಕ್ಷನ್ ಹೀರೋ ಅನ್ನು ಕನ್ನಡಚಿತ್ರರಂಗಕ್ಕೆ ತಂದ ಸಿನಿಮಾವಿದು. ಇದಾದ ಬಳಿ ಸೂರಿಯವರು ಒಂದು ಹಿಟ್, ಒಂದು ಫ್ಲಾಪ್ ಸಿನಿಮಾಗಳನ್ನು ನೀಡುತ್ತಾ ಬಂದರು. ಇವರ ಹಿಟ್ ಸಿನಿಮಾಗಳು ಜಾಕಿ, ಟಗರು, ಕಡ್ಡಿಪುಡಿ. ಅಂಡರ್‌ ವರ್ಲ್ಡ ಅನ್ನು ತುಂಬಾ ರಿಯಾಲಿಸ್ಟಿಕ್ ಆಗಿ ತೋರಿಸುವ ಕೌಶಲ್ಯ ಹೊಂದಿರುವ ಇವರು, ಹೀರೋ ಜೊತೆಗೆ ಫೋಷಕ ನಟರ ಪಾತ್ರಗಳಿಗೂ ಅಷ್ಟೇ ಒತ್ತು ನೀಡುತ್ತಿದ್ದರು. ಸದ್ಯ ಅವರು ಜಯಣ್ಣ ಅವರ ಪ್ರೊಡಕ್ಷನ್ಸ್ ಅಲ್ಲಿ ಹೊಸ ಸಿನಿಮಾ ಮಾಡ್ತಿದ್ದು, ಈ ಚಿತ್ರ ಕೈಹಿಡಿಯಲಿದ್ಯಾ ಎಂಬುದನ್ನು ಕಾದು ನೋಡ್ಬೇಕು.

കൂടുതല്‍ കാണാം

ಗುರುಪ್ರಸಾದ್

ಗುರುಪ್ರಸಾದ್ ತಮ್ಮ ನವೀರಾದ ಮತ್ತು ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಸಿದ್ಧಹಸ್ತರು. 2006ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದ ಇವರು, ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದರು. ಇದು ನವರಸ ನಾಯಕ ಜಗ್ಗೇಶ್‌ರ ನೂರನೇ ಚಿತ್ರ. ಇದಾದ ಬಳಿಕ ಇವರಿಬ್ಬರ ಕಾಂಬಿನೇಷನ್‌ನಲ್ಲಿ ವಿಭಿನ್ನ ಟೈಟಲ್ ಮತ್ತು ಅಲೋಚನೆಯೊಂದಿಗೆ ಬಂದ 'ಎದ್ದೇಳು ಮಂಜುನಾಥ' ಸೂಪರ್ ಹಿಟ್ ಆಗಿತ್ತು. ಇದಾದ ಬಂದ ಯಾವ ಸಿನಿಮಾಗಳು ಕೂಡ ಗುರುಪ್ರಸಾದ್ ಕೈಹಿಡಿಯಲಿಲ್ಲ. ಇತ್ತೀಚೆಗೆ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಬಂದ ರಂಗಾಯಕ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಸಿನಿಮಾದಲ್ಲಿ ಡಬಲ್‌ ಮೀನಿಂಗ್ ಹೆಚ್ಚಾಯಿತು ಎಂಬ ಅಭಿಪ್ರಾಯಗಳು ಕೇಳಿಬಂದವು.

കൂടുതല്‍ കാണാം


ಪ್ರೇಮ್

ಪ್ರೇಮ್ ಅಂದಾಕ್ಷಣ ನೇನಪಾಗೋದೇ ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿನಿಮಾಗಳು. ಈ ಮೂರು ಸಿನಿಮಾಗಳ ಮೂಲಕ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ್ದರು. ಅದರಲ್ಲೂ ಜೋಗಿ ಸಿನಿಮಾ ಬಂದಾಗ ಥಿಯೇಟರ್ ಮುಂದೆ ಜನಜಾತ್ರೆ. ಇವರ ಸಿನಿಮಾಗಳಲ್ಲಿ ಸಹಾಡುಗಳು ಹಿಟ್ ಆಗುತ್ತಿದ್ದವು. ಹೀರೋ, ಹೀರೋಯಿನ್, ಸರ್ಪೋಟಿಂಗ ಕ್ಯಾರೆಕ್ಟರ್‌ಗಳು ಜನರಿಗೆ ಬೇಗ ಕನೆಕ್ಸ್ ಆಗುತ್ತಿದ್ದವು. ಈ ಮೂರು ಚಿತ್ರಗಳ ಬಳಿಕ ಪ್ರೇಮ್, ರಾಜ್ ದಿ ಶೋ ಮ್ಯಾನ್, ಜೋಗಯ್ಯ್, ದಿ ವಿಲನ್ , ಏಕ್‌ ಲವ್ ಯಾ ಸಿನಿಮಾ ಮಾಡಿದ್ರು. ಈ ಪೈಕಿ ರಾಜ್‌ ಬಿಟ್ಟರೆ ಬೇರೆ ಯಾವ ಚಿತ್ರಗಳು ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಸದ್ಯ ಅವರು ಕೆಡಿ ಡೆವಿಲ್ ಸಿನಿಮಾ ಮಾಡ್ತಿದ್ದು, ಇದರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದರ ಜೊತೆಗೆ ದರ್ಶನ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

കൂടുതല്‍ കാണാം

ವಿಜಯ ಪ್ರಸಾದ್

ಸಿಲ್ಲಿಲಲ್ಲಿ ಎಂಬ ಕನ್ನಡದ ಪ್ರಸಿದ್ದ ಧಾರವಾಹಿಗೆ ನಿರ್ದೇಶನ ಮಾಡಿ ಜನ ಮನ್ನಣೆಗಳಿಸಿದ ವಿಜಯ ಪ್ರಸಾದ್, ಸಿದ್ಲಿಂಗು ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತು. ಇದಾದ ಬಳಿಕ ಬಂದ ನೀರ್ ದೋಸೆ ಚಿತ್ರ ಕೂಡ ಹಿಟ್ ಆಯಿತು. ವಿಜಯ ಪ್ರಸಾದ್ ತಮ್ಮ ಸಿನಿಮಾಗಳ ಪಾತ್ರಗಳನ್ನು ತುಂಬಾ ಆಳವಾಗಿ ಹೆಣೆಯುತ್ತಿದ್ದರು. ಜೊತೆಗೆ ಒಂದಷ್ಟು ಚೇಷ್ಟೇ, ವಿಡಂಬನೆ, ಪ್ರಬುದ್ಧವಾದ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಈ ಎರಡು ಸಿನಿಮಾಗಳ ಬಳಿಕ ಬಂದ ಪೆಟ್ರೋಮ್ಯಾಕ್ಸ್, ತೋತಾಪುರಿ ಚಾಪ್ಟರ್ 1, ತೋತಾಪುರಿ 2 ಸಿನಿಮಾಗಳು ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಸದ್ಯ ಇವರು ಸಿದ್ಲಿಂಗು ೨ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಅವರಿಗೆ ಬ್ರೇಕ್ ನೀಡಲಿದ್ಯಾ ಎಂಬುದನ್ನು ಕಾದು ನೋಡಬೇಕು.

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+