X
ഹോം ടോപ് ലിസ്റ്റിങ്ങ്‌

ಕಳೆದ ವರ್ಷ ವಿವಾಹ ಬಂಧನಕ್ಕೊಳಗಾದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಪಟ್ಟಿ

Author: Sowmya Bairappa | Published: Saturday, January 21, 2023, 12:56 PM [IST]

ಸಿನಿಮಾಗಳ ವಿಷಯಗಳ ಹೊರತಾಗಿ ಹಲವು ಸೆಲೆಬ್ರಿಟಿಗಳಿಗೂ ಸಹ ೨೦೨೨ ಶುಭ ವರ್ಷವೇ. ಏಕೆಂದರೆ ಹಲವು ಸಿನಿಮಾ ಹಾಗೂ ಟಿವಿ ಸೆಲೆಬ್ರಿಟಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022ರಲ್ಲಿ ಮದುವೆಯಾದ ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

Share:
cover image
ಆದಿತಿ ಪ್ರಭುದೇವ
1

ಕನ್ನಡದ ನಟಿ ಅದಿತಿ ಪ್ರಭುದೇವ 2022ರ ನವೆಂಬರ್ 28ರಂದು ಹಸೆಮಣೆಗೆ ಕಾಲಿಟ್ಟರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅದಿತಿ ಹಾಗೂ ಉದ್ಯಮಿ ಯಶಸ್ ಎಂಬುವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಂಗಳೂರು ಅರಮನೆ ಮೈದಾನದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಇವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟ-ನಟಿಯರು ಭಾಗವಹಿಸಿದ್ದರು.

കൂടുതല്‍ കാണാം


ಶುಭ ಪೂಂಜಾ
2

2022ರ ಆರಂಭದಲ್ಲಿಯೇ ಕನ್ನಡದ ನಟಿ ಶುಭಾ ಪೂಂಜಾ ಅವರು ದಾಂಪತ್ಯಕ್ಕೆ ಕಾಲಿರಿಸಿದರು. ತಮ್ಮ ಬಹು ಸಮಯದ ಗೆಳೆಯ ಸುಮಂತ್ ಮಹಾಬಲ ಅವರನ್ನು ಜನವರಿ 05 ರಂದು ವಿವಾಹವಾದರು. ಸರಳವಾಗಿ ಈ ವಿವಾಹ ಕಾರ್ಯಕ್ರಮ ನೆರವೇರಿತ್ತು. 

കൂടുതല്‍ കാണാം

ಮನೋರಂಜನ್ ರವಿಚಂದ್ರನ್
3

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ  ಕೂಡ ಕಳೆದ ವರ್ಷ ಅದ್ದೂರಿ ಶುಭ ಕಾರ್ಯ ನಡೆಯಿತು. ರವಿಚಂದ್ರನ್ ಪುತ್ರ ಮನೊರಂಜನ್ ಈ ವರ್ಷ ವಿವಾಹವಾದರು. ಆಗಸ್ಟ್ 20 ಹಾಗೂ 21ರಂದು ಎರಡು ದಿನ ಅದ್ಧೂರಿಯಾಗಿ ಮನೊರಂಜನ್ ವಿವಾಹ ಕಾರ್ಯ ನೆರವೇರಿತು. ಯಶ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ರವಿಚಂದ್ರನ್ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೊರಂಜನ್ ವಿವಾಹವಾದ ಯುವತಿಯ ಹೆಸರು ಸಂಗೀತ.

കൂടുതല്‍ കാണാം


ತೇಜಸ್ವಿನಿ
4

ಕಿರುತೆರೆ ಹಾಗೂ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ತೇಜಸ್ವಿನಿ ಪ್ರಕಾಶ್ ತಮ್ಮ ಗೆಳೆಯ ಫಲಿ ವರ್ಮಾ ನದೀಮ್‌ಪಳ್ಳಿ ಅವರೊಟ್ಟಿಗೆ ಮಾರ್ಚ್ ೨೦ರಂದು  ವಿವಾಹವಾದರು. ನಟಿ ಕಾರುಣ್ಯಾ ರಾಮ್ ಸೇರಿದಂತೆ ಕನ್ನಡ ಸಿನಿಮಾ ಹಾಗೂ ಟಿವಿ ಲೋಕದ ಕೆಲ ಸೆಲೆಬ್ರಿಟಿಗಳು ಇವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದಹಾಗೆ ವಿನಯಾ ಪ್ರಕಾಶ್ ಅವರ ಪುತ್ರಿ ತೇಜಸ್ವಿನಿ ಪ್ರಕಾಶ್.

കൂടുതല്‍ കാണാം

ರಶ್ಮಿ ಪ್ರಭಾಕರ್‌
5

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮಾತಾಗಿದ್ದ ರಶ್ಮಿ ಪ್ರಭಾಕರ್ ಏಪ್ರಿಲ್ ೨೫ರಂದು ನಿಖಿಲ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಬೆಂಗಳೂರಿನ ಕನ್ವೆಶನ್ ಸೆಂಟರ್ ಒಂದರಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಕಲ್ಯಾಣ ನಡೆದಿದ್ದು, ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ವಿವಾಹ ಕಾರ್ಯ ಜರುಗಿತು.

കൂടുതല്‍ കാണാം


ಸುಶ್ಮಿತಾ ಗೌಡ
6

ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಶ್ಮಿತಾ ಗೌಡ ಅವರು ಅಶ್ವಿನ್ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನಲ್ಲಿ ಅಶ್ವಿನ್ ಹಾಗೂ ಮದ್ಯ ಹುಡುಗಿ  ಸುಶ್ಮಿತಾ ಗೌಡ ವಿವಾಹ ಅದ್ಧೂರಿಯಾಗಿ ನೆರವೇರಿತ್ತು.     കൂടുതല്‍ കാണാം

ನಿಕ್ಕಿ ಗಲ್ರಾನಿ
7

ಸಂಜನಾ ಗಲ್ರಾನಿ ಸಹೋದರಿ, ಸ್ವತಃ ನಟಿಯಾಗಿರುವ ನಿಕ್ಕಿ ಗಲ್ರಾನಿ, ತೆಲುಗಿನ ಜನಪ್ರಿಯ ನಟ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಮೇ 18 ರಂದು ವಿವಾಹವಾದರು. ಆದಿ ಪಿನಿಶೆಟ್ಟಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. 'ರಂಗಸ್ಥಳಂ', 'ಸರೈನೋಡು', 'ಯೂ ಟರ್ನ್' ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಕ್ಕಿ ಗಲ್ರಾನಿ ಸಹ ತೆಲುಗು ಚಿತ್ರರಂಗದಲ್ಲಿಯೇ ನೆಲೆಗೊಳ್ಳಲು ಯತ್ನಿಸುತ್ತಿದ್ದಾರೆ.

കൂടുതല്‍ കാണാം


ಶಶಿಕುಮಾರ್ (ಬಿಗ್ ಬಾಸ್)
8

ಬಿಗ್ ಬಾಸ್ ಸೀಸನ್ 6ರ ವಿನ್ನರ್ ಶಶಿಕುಮಾರ್ ಕೂಡ ಕಳೆದ ವರ್ಷ ವಿವಾಹವಾದರು.  ಶಶಿಕುಮಾರ್ ಸ್ವಾತಿ ಎಂಬುವವರನ್ನು ಮದುವೆಯಾಗಿದ್ದು, ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ. 

കൂടുതല്‍ കാണാം

ಸಾಗರ್ ಪುರಾಣಿಕ್
9

ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ನಟ ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್. ಮಹಾಸತಿ ಧಾರಾವಾಹಿಯನ್ನು ಸುನಿಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು. ಈ ಸೆಟ್‌ನಲ್ಲಿ ಸಾಗರ್ ಪುರಾಣಿಕ್ ಹಾಗೂ ದೀಪ ಭೇಟಿಯಾಗಿದ್ದರಂತೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರು 2022ರ ಮೇ 18ರಂದು  ಮದುವೆಯಾಗಿತ್ತು. 

കൂടുതല്‍ കാണാം


ಐಶ್ವರ್ಯ ಸಾಲಿಮಠ
10

ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಕೂಡ ಕಳೆದ ವರ್ಷ ವಿವಾಹ ಬಂಧನಕ್ಕೆ ಒಳಗಾಗಿದ್ದರು. ನಟ ವಿನಯ್ ಜೊತೆ ಐಶ್ವರ್ಯ ಸಾಲಿಮಠ ಮದುವೆಯಾಗಿದ್ದು, ಇವರಿಬ್ಬರು ಮಹಾಸತಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ವಿನಯ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದು, ಇವರಿಬ್ಬರ ವಿವಾಹ ಮೇ ತಿಂಗಳಲ್ಲಿ ಜರುಗಿತ್ತು. 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+