X
ഹോം ടോപ് ലിസ്റ്റിങ്ങ്‌

2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸ್ಯಾಂಡಲ್‌ವುಡ್ ನಟರ ಪಟ್ಟಿ!

Author: Sowmya Bairappa | Published: Friday, May 12, 2023, 11:27 AM [IST]

ಇತ್ತೀಚೆಗೆ ತೆರೆಕಾಣುತ್ತಿರುವ ಕನ್ನಡದ ಸಿನಿಮಾಗಳು ವಿಶ್ವಾದ್ಯಂತ ಹವಾ ಕ್ರಿಯೇಟ್ ಮಾಡುವ ಮಟ್ಟಿಗೆ ನಿರ್ಮಾಣ ಆಗುತ್ತಿವೆ. ಸದ್ಯ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಒಳ್ಳೆ ಕಂಟೆಂಟ್ ಸಿನಿಮಾಗಳು, ಅದ್ಧೂರಿ ಮೇಕಿಂಗ್​​​​ನೊ ದಿಗೆ 100 ಕ್ಲಬ್ ಸೇರುವಲ್ಲಿ ಇತಿಹಾಸ ಬರೆದಿಡುತ್ತಿವೆ. ಸಿನಿಮಾ ಹಿಟ್ ಆಗುವುದರ ಜೊತೆಗೆ ನಟರ ಸಂಭಾವನೆ ಕೂಡ ಹೆಚ್ಚುತ್ತಿದೆ. 2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸ್ಯಾಂಡಲ್‌ವುಡ್ ನಟರ ಪಟ್ಟಿ ಇಲ್ಲಿದೆ.

Share:
cover image
ಯಶ್
1

ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಯಶ್ ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ. 'ಕೆಜಿಎಫ್ ಚಾಪ್ಟರ್ 2'ಗಾಗಿ ಅವರು 30 ಕೋಟಿ ರೂ. ಸಂಭಾವನೆ ಪಡೆದಿದ್ದರು. ಕೆಜಿಎಫ್ ಯಶಸ್ಸಿನ ನಂತರ ಅವರು ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಮುಂದಿನ ಸಿನಿಮಾಗಾಗಿ ರಾಕಿ ಭಾಯ್ 50 ಕೋಟಿ 100 ಕೋಟಿ ವರೆಗೆ ಸಂಭಾವನೆ ಪಡೆಯಲಿದ್ದಾರಂತೆ.     കൂടുതല്‍ കാണാം


ದರ್ಶನ್
2

ಚಂದನವನದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ ತೂಗುದೀಪ್ ಕೂಡ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ದರ್ಶನ್ ಸಿನಿಮಾವೊಂದಕ್ಕೆ 22 ರಿಂದ 26 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಅವರು ಎರಡನೇ ಸ್ಥಾನದಲ್ಲಿದ್ದಾರೆ.  ದರ್ಶನ್ ಸದ್ಯ ತರುಣ್ ಸುದೀರ್ ನಿರ್ದೇಶನದ ಕಾಟೇರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

കൂടുതല്‍ കാണാം

ಸುದೀಪ್
3

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.  ಸ್ಯಾಂಡಲ್‌ವುಡ್ ಬಾದ್‌ಶಾ ಇತ್ತೀಚೆಗಷ್ಟೇ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಈ ವರ್ಷ ಕೆಲ ಸಿನಿಮಾಗಳಿಗೆ ಸಹಿ ಹಾಕಿರುವ ಕಿಚ್ಚ ಸುದೀಪ್, 2023ರ ವರದಿಗಳ ಪ್ರಕಾರ ಪ್ರತಿ ಚಿತ್ರಕ್ಕೆ 20 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

കൂടുതല്‍ കാണാം


ಉಪೇಂದ್ರ
4

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ, ನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾವೊಂದಕ್ಕೆ 10 ರಿಂದ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತಿಚೇಗಷ್ಟೇ ಕಬ್ಜ ಸಿನಿಮಾದಲ್ಲಿ ನಟಿಸಿದ್ದ ರಿಯಲ್ ಸ್ಟಾರ್, ಸದ್ಯ ತಾವೇ ನಿರ್ದೇಶಿಸಿ, ನಟಿಸುತ್ತಿರುವ ಯು & ಐ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.   

കൂടുതല്‍ കാണാം

ರಿ‍ಷಭ್ ಶೆಟ್ಟಿ
5

ರಿಷಬ್ ಶೆಟ್ಟಿ ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತಮ್ಮ ಪ್ರತಿಭೆಯಿಂದಲೇ ಸ್ಟಾರ್ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ನೀಡಿತ್ತು. ಕಾಂತಾರ ಸಿನಿಮಾಗೆ ಇವರು 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.  ಸದ್ಯ ಅವರ ಸಂಭಾವನೆ ಹೆಚ್ಚಾಗಿದ್ದು, ಒಂದು ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ರಿಷಬ್ ಸದ್ಯ ಕಾಂತಾರ 2 ಮತ್ತು ಕಿರಿಕ್ ಪಾರ್ಟಿ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.  

കൂടുതല്‍ കാണാം


ರಕ್ಷಿತ್ ಶೆಟ್ಟಿ
6

ಸಿಂಪಲ್ ಸ್ಟಾರ್  ರಕ್ಷಿತ್ ಶೆಟ್ಟಿ  ಪ್ರತಿ ಸಿನಿಮಾಗೆ 5 ರಿಂದ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 2022ರಲ್ಲಿ  ರಕ್ಷಿತ್ ಅಭಿನಯದ 777 ಚಾರ್ಲಿ ಸಿನಿಮಾ ಬ್ಲಾಕ್‌ ಬಸ್ಟರ್ ಆಗುವುದರ ಜೊತೆಗೆ 100 ಕೋಟಿ ಕ್ಲಬ್ ಸೇರಿತ್ತು. ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇದಲ್ಲದೇ ಕಿರಿಕ್ ಪಾರ್ಟಿ 2, ರಿಚರ್ಡ್ ಆಂಟನಿ ಸಿನಿಮಾಗಳಲ್ಲಿ ಅವರು  ಬ್ಯುಸಿಯಾಗಿದ್ದಾರೆ.  

 

കൂടുതല്‍ കാണാം

ಶಿವರಾಜಕುಮಾರ್
7

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿ ಚಿತ್ರಕ್ಕೆ  6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.  ಮೂರು ದಶಕಗಳ ಕಾಲ ಜನರನ್ನು ರಂಜಿಸಿರುವ ಶಿವಣ್ಣ, ಈವರೆಗೂ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಕಬ್ಜ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯ ಶಿವಣ್ಣ ಬಹುನಿರೀಕ್ಷಿತ ಘೋಸ್ಟ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 

കൂടുതല്‍ കാണാം


ಶ್ರೀ ಮುರುಳಿ
8

ರೋರಿಂಗ್ ಸ್ಟಾರ್ ಶ್ರೀಮುರಳಿ  ಪ್ರತಿ ಸಿನಿಮಾಗೆ 4 ರಿಂದ 6 ಕೋಟಿ ಸಂಭಾವನೆ ಪಡೆಯುತ್ತಾರೆ.  ಸದ್ಯ ಇವರು ಡಾ. ಸೂರಿ ನಿರ್ದೇಶನ ಬಘೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಈ ಕಥೆ ಬರೆದಿದ್ದು, ವಿಜಯ್ ಕಿರಂಗಂದೂರು  ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮುರಳಿ ಖಡಕ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

കൂടുതല്‍ കാണാം

ಗಣೇಶ್
9

ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿ ಚಿತ್ರಕ್ಕೆ ಸುಮಾರು 3 ರಿಂದ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 2022ರಲ್ಲಿ ಗಣೇಶ್ ನಟನೆಯ ಗಾಳಿಪಟ 2 ಸಿನಿಮಾ ಹಿಟ್ ಆಗಿತ್ತು. ಸದ್ಯ ಗಣೇಶ್ ಅಭಿನಯದ ಬಾನ ದಾರಿಯಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ ದಿ ಸ್ಟೋರಿ ಆಫ್ ರಾಯಗಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 

കൂടുതല്‍ കാണാം


ಧ್ರುವ ಸರ್ಜಾ
10

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸದ್ಯ ಮಾರ್ಟಿನ್ ಮತ್ತು ಕೆಡಿ ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಇವೆರಡೂ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿವೆ. ನಟ ಧ್ರುವ ಸರ್ಜಾ ಸಿನಿಮಾವೊಂದಕ್ಕೆ 3 ರಿಂದ 5 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಾರೆ.

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+