X
ഹോം ടോപ് ലിസ്റ്റിങ്ങ്‌

ಸ್ವಪ್ನಾ ದೀಕ್ಷಿತ್ ಟು ಅಪೂರ್ವಶ್ರೀ: ಅನೇಕ ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಕನ್ನಡ ಕಿರುತೆರೆ ನಟಿಯರಿವರು!

Author: Sowmya Bairappa | Published: Tuesday, June 4, 2024, 10:10 AM [IST]

ಸಿನಿಮಾವಾಗಲಿ, ಧಾರಾವಾಹಿಯಾಗಲಿ ಕೇವಲ ನಾಯಕಿ-ನಾಯಕ ಇದ್ದುಬಿಟ್ಟರೆ ಸಾಲಲ್ಲ. ಫೋಷಕ ಪಾತ್ರಗಳು ಅಷ್ಟೇ ಮುಖ್ಯ. ಕಿರುತೆರೆಯಲ್ಲಿ ನಾಯಕ-ನಾಯಕಿಯರಿಗೆ ಎಷ್ಟು ಬೇಡಿಕೆ ಇರುತ್ತದೋ, ಅಷ್ಟೇ ಪೋಷಕ ಪಾತ್ರಗಳೂ ಗಮನ ಸೆಳೆಯುತ್ತವೆ. ನಾಯಕ-ನಾಯಕಿಯರ ತಂದೆ, ತಾಯಿ ಪಾತ್ರ ನಿರ್ವಹಿಸಿರುವವರು ತಮ್ಮ ಅಭಿನಯದಿಂದಲೇ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿರುತ್ತಾರೆ. ಇಲ್ಲಿ ಅನೇಕ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಫೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಸ್ವಪ್ನಾ ದೀಕ್ಷಿತ್

ಸ್ವಪ್ನಾ ದೀಕ್ಷಿತ್ ಕಿರುತೆರೆ ಪ್ರೇಕ್ಷಕರಿಗೆ ಹಲವು ವರ್ಗಳಿಂದ ಚಿರಪರಿಚಿತ. ತಮ್ಮ ಮನೋಜ್ಞ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವ ಸ್ವಪ್ನಾ, ಸೇವಂತಿ, ಇಂತಿ ನಿಮ್ಮ ಆಶಾ, ಕಮಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರ, ಖಳ ನಾಯಕಿಯಾಗಿಯೂ ಬಣ್ಣಹಚ್ಚಿದ್ದಾರೆ. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಸಪ್ನಾ ದೀಕ್ಷಿತ್ ಅವರು ಪಾಂಡುರಂಗ ವಿಠಲ, ದಂಡ ಪಿಂಡಗಳು, ಸಂಪಿಗೆ ಪರಿಮಳ, ಮಾಂಗಲ್ಯ, ಪುರುಷೋತ್ತಮ, ಗಿರಿಜಾ ಕಲ್ಯಾಣ, ಪದ್ಮಾವತಿ, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.


ಸಂಗೀತ ಅನಿಲ್

ಸ್ತಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ಫೋಷಕ ಪಾತ್ರದ ಮೂಲಕ ಗಮನ ಸೆಳೆದಿರುವ ನಟಿ ಸಂಗೀತಾ,  ಸೇವಂತಿ, ಇಂತಿ ನಿಮ್ಮ ಆಶಾ, ಮಂಗಳ ಗೌರಿ ಮದುವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಸಂಗೀತ ಅವರು ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

കൂടുതല്‍ കാണാം

ಸ್ವಾತಿ ಗುರುದತ್ತ್

ಸದಾ ನಗುತ್ತಿರುವ ಹಾಗೂ ಮೃದು ವ್ಯಕ್ತಿತ್ವದ ನಟಿ ಸ್ವಾತಿ 1995ರಿಂದ ಇಂದಿನವರೆಗೂ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.  ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಭಾರ್ಗವ ಅವರ ಉಯ್ಯಾಲೆ ಸೇರಿದಂತೆ ಕಿರುತೆರೆ ಪಯಣದಲ್ಲಿ ಸ್ವಾತಿ ಅವರು ಇಂದಿನವರೆಗೂ ಸುಮಾರು 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

കൂടുതല്‍ കാണാം


ಚಿತ್ಕಲಾ ಬಿರಾದಾರ್

ಟೀಚರ್ ಆಗಿದ್ದ ನಟಿ ಚಿತ್ಕಲಾ ಬಿರಾದರ್, ನಂತರ ನಟನೆ ಅರಸಿ ಬಂದರು. ಬಂದೇ ಬರತಾವ ಕಾಲ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಇವರು, ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಕನ್ನಡತಿ, ರತ್ನಮಾಲಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜತೆಗೆ ಮದುವೆ ಮನೆ, ಫ್ಯಾಂಟಮ್, ಪ್ರೇಮ ಪೂಜ್ಯಂ ಹಾಗೂ ನಿನ್ನ ಸನಿಹಕೆ ಚಿತ್ರಗಳಲ್ಲೂ ಪೋಷಕ ನಟಿ ಪಾತ್ರಗಳಲ್ಲಿ ಮಿಂಚಿದ್ದಾರೆ. 


കൂടുതല്‍ കാണാം

ಮಧುಮತಿ

ಕನ್ನಡತಿ ಧಾರಾವಾಹಿಯಲ್ಲಿ ಕೌಟುಂಬಿಕ ಪಾತ್ರಕ್ಕೆ ಜೀವ ತುಂಬಿರುವ ಮಧುಮತಿ ಅವರು ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಜೀವ ಹೂವಾಗಿದೆ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅವರು, ನಂತರ ಸುಂದರಿ, ಕನ್ನಡತಿ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ಮೈನಸ್ 18 ಎನ್ನುವ ವೆಬ್ ಸೀರೀಸ್‌ನಲ್ಲೂ ನಟಿಸಿದ್ದು, ಮಧುಮತಿ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ. 



ಅಪೂರ್ವಶ್ರೀ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹಿಟ್ ಆದ ನಟಿ ಅಪೂರ್ವಶ್ರೀ. ಹಲವು ವರ್ಷಗಳಿಂದ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಜೊತೆ ಜೊತೆಯಲಿ ಧಾರಾವಾಹಿ ಇವರಿಗೆ ಹೆಸರು ತಂದುಕೊಟ್ಟಿದೆ. ಜೊತೆಗೆ ಸುಂದರಿ ಗಂಡ ಸದಾನಂದ, ದಾಸ, ಜಾಕಿ, ಅಣ್ಣಬಾಂಡ್, ಕಲ್ಪನ, ಮಿಲನ, ಸುಂಟರಗಾಳಿ, ಗಾಜಿನ ಮನೆ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಸಾರಿಕಾ ರಾಜ್ ಅರಸ್

ಬಹಳ ವರ್ಷಗಳಿಂದ ಕಿರುತೆರೆಯಲ್ಲಿರುವ ನಟಿ ಸಾರಿಕಾ ರಾಜ್ ಅರಸ್. ಬಾಲನಟಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾರಿಕಾ ಅವರು ಇದುವರೆಗೂ 400ಕ್ಕೂ ಹೆಚ್ಚು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಬೀಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 32 ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ಸಾರಿಕಾ ಅವರು, ನಾಯಕಿ, ಖಳನಾಯಕಿ, ವಿಲನ್, ಹುಚ್ಚಿ, ಪೊಲೀಸ್, ಡಾಕ್ಟರ್ ಸೇರಿದಂತೆ ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ.




Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+