X
ഹോം ടോപ് ലിസ്റ്റിങ്ങ്‌

ಪದ್ಮಜಾ ರಾವ್ ಟು ಕೋಳಿ ರಮ್ಯಾ: ವಿಚ್ಛೇದನ ಪಡೆದು ಎರಡನೇ ಮದುವೆಯಾದ ಕನ್ನಡದ ನಟಿಯರ ಪಟ್ಟಿ ಇಲ್ಲಿದೆ.

Author: Sowmya Bairappa | Published: Saturday, December 9, 2023, 05:44 PM [IST]

ಮದುವೆ ಎಂದರೆ ಸಂಭ್ರಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ, ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಎಲ್ಲರಿಗೂ ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರವಿರುತ್ತದೆ. ಕೆಲವೊಮ್ಮೆ ಕುಟುಂಬಸ್ಥರೇ ನೋಡಿ ಮದುವೆ ಮಾಡಿದ್ದರೂ ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. ಇನ್ನು ಕೆಲವೊಮ್ಮೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ಮುರಿದು ಬೀಳುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರರಂಗದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾದ ಕನ್ನಡದ ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಪದ್ಮಜಾ ರಾವ್

ನಟಿ ಪದ್ಮಜಾ ರಾವ್ ಕುಟುಂಬಸ್ಥರ ಆಸೆಯಂತೆ 19ನೇ ವಯಸ್ಸಿಗೆ ಮದುವೆಯಾದರು. ನಟಿಯಾಗಬೇಕೆಂಬ ಕನಸು ಕಂಡಿದ್ದ ಪದ್ಮಜಾ ರಾವ್, ವೈಯಕ್ತಿಕ ಕಾರಣಗಳಿಂದ ಪತಿಯಿಂದ ಡಿವೋರ್ಸ್ ಪಡೆದರು. ಈ ವೇಳೆ ಪದ್ಮಜಾ ರಾವ್ ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿದ್ದರು. ನಂತರ ಮತ್ತೆ ಮದುವೆಯಾದರು. ಆಮೇಲೆ ವೈಶಾಲಿ ಕಾಸರವಳ್ಳಿ ಅವರಿಂದ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಪಡೆದರು.  ಹೀರೋಯಿನ್ ಆಗಬೇಕೆಂಬ ಆಸೆಯಿದ್ದರೂ ಕೂಡ ಲೇಟ್ ಆಗಿ ನಟನೆ ಆರಂಭಿಸಿದ್ದರಿಂದ ಅತ್ತಿಗೆ, ತಾಯಿ ಪಾತ್ರದ ಮೂಲಕ ಗಮನ ಸೆಳೆದರು. ಸದ್ಯ ಪದ್ಮಜಾ ರಾವ್ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. 

 

കൂടുതല്‍ കാണാം


ಜ್ಯೋತಿ ರೈ

ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ 20ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕೆಲ ವರ್ಷಗಳ ಹಿಂದೆ ಕಾರಣಾಂತರಗಳಿಂದ ಪತಿಯಿಂದ ಡಿವೋರ್ಸ್ ಪಡೆದರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಆದರೆ, ಇತ್ತೀಚೆಗಷ್ಟೇ ಜ್ಯೋತಿ ರೈ ಪರಭಾಷಾ ಯುವ ನಿರ್ದೇಶಕ ಸುಕುಮಾರ್ ಮದುವೆಯಾಗಿದ್ದಾರೆ. 

 

കൂടുതല്‍ കാണാം

ಕೋಳಿ ರಮ್ಯಾ

ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಹಾಗೂ ಮಿಥುನ ರಾಶಿ ಶೀರಿಯಲ್ ಖ್ಯಾತಿಯ ನಟಿ ಕೋಳಿ ರಮ್ಯಾ, ಮೊದಲು ನಟ ಶಶಿರ್ ಎಂಬುವವರನ್ನು ಮದುವೆಯಾಗಿದ್ದರು. ಸದ್ಯ ಮೊದಲ ಪತಿಯಿಂದ ದೂರವಾಗಿ, ನೃತ್ಯ ಸಂಯೋಜಕ ವರದಾ ಅವರನ್ನು ಮದುವೆಯಾಗಿದ್ದಾರೆ.

 


ಅನು ಪ್ರಭಾಕರ್

 ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್, 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವರಿಸಿದ್ದರು. ಆದರೆ, 2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ನಂತರ 2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಸದ್ಯ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.  

 

കൂടുതല്‍ കാണാം

ಸುಧಾರಾಣಿ

ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಟಿ ಸುಧಾರಾಣಿ, ನಟನೆಗೆ ಗುಡ್‌ಬೈ ಹೇಳಿ 1996ರಲ್ಲಿ ಮದುವೆಯಾಗಿ ಅಮೇರಿಕಾ ಸೇರಿದರು. ಆದರೆ, ಅವರಿಗೆ ಮೊದಲ ಪತಿಯಿಂದ ದಾಂಪತ್ಯದ ಸುಖ ಸಿಗಲೇ ಇಲ್ಲ. ಬದಲಾಗಿ ಪತಿ ಡಾ.ಸಂಜಯ್ ಅವರಿಂದ ಪ್ರಾಣ ಬೆದರಿಕೆ ಇತ್ತು. 1998ರಲ್ಲಿ ಅಮೆರಿಕಾದಲ್ಲಿ ಚಿತ್ರಹಿಂಸೆ ನೀಡಿದ ಡಾ.ಸಂಜಯ್‌ಗೆ ವಿಚ್ಛೇದನ ನೀಡಿ, ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನ ಆರಂಭಿಸಿದರು. ನಂತರ ತಮ್ಮ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ, ತಮಗೆ ಮಾನಸಿಕ ಸ್ಥೈರ್ಯ ತುಂಬಿದ್ದ ಗೋವರ್ಧನ್ ಎಂಬುವರರನ್ನ ಮದುವೆ ಆದರು. 

കൂടുതല്‍ കാണാം


ಶೃತಿ

ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ಮೊದಲು ಚಿತ್ರ ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾಗಿದ್ದರು. ಅವರೊಂದಿಗೆ 12 ವರ್ಷ ದಾಂಪತ್ಯ ಜೀವನ ನಡೆಸಿ, ಕಾರಣಾಂತರಗಳಿಂದ ಪರಸ್ಪರ ದೂರವಾದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ.  ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾಗಿದ್ದರು. ಇವರು ಮೊದಲ ಪತಿಗೆ ವಿಚ್ಛೇದನ ನೀಡದೇ ಮದುವೆಯಾಗಿದ್ದರಿಂದ ನ್ಯಾಯಾಲಯ ಇವರ ಮದುವೆಯನ್ನು ಅಸಿಂಧುಗೊಳಿಸಿತ್ತು. 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+