X
ഹോം ടോപ് ലിസ്റ്റിങ്ങ്‌

ಸಿರಿಜಾ ಟು ಮಲೈಕಾ: 30 ವರ್ಷವಾದರೂ ಮದುವೆಯಾಗದ ಕಿರುತೆರೆ ನಟಿಯರ ಪಟ್ಟಿ ಇಲ್ಲಿದೆ.

Author: Sowmya Bairappa | Published: Thursday, September 7, 2023, 04:06 PM [IST]

ಮದುವೆ ಎಂಬುದು ವೈಯಕ್ತಿಕ ವಿಷಯವಾದರೂ ಸೆಲೆಬ್ರಿಟಿಗಳ ವಿವಾಹದ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿರುತ್ತದೆ. ಅನೇಕ ನಟಿಯರು ಮದುವೆಯಾಗಲು ನಿರ್ಧರಿಸುವಷ್ಟರಲ್ಲಿ ವಯಸ್ಸು ದಾಟಿ ಹೋಗಿರುತ್ತದೆ. ಅದರಲ್ಲೂ ಸಿನಿಮಾ ನಟಿಯರಿಗಿಂತ ಕಿರುತೆರೆ ನಟಿಯರು ಜನರಿಗೆ ಹೆಚ್ಚು ಹತ್ತಿರುವಾಗಿರುವುದರಿಂದ ಅವರ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗಳಾಗುತ್ತಿರುತ್ತವೆ. ಇಲ್ಲಿ ೩೦ ವರ್ಷವಾದರೂ ಮದುವೆಯಾಗದ ಕಿರುತೆರೆ ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಸಿರಿಜಾ

ರಂಗೋಲಿ, ಬದುಕು, ಮನೆಯೊಂದು ಮೂರು ಬಾಗಿಲು ಸೀರಿಯಲ್‌ಗಳ ಮೂಲಕ ಅಪಾರ ಖ್ಯಾತಿ ಪಡೆದಿರುವ ನಟಿ ಸಿರಿಜಾ ಇನ್ನೂ ಮದುವೆಯಾಗಿಲ್ಲ. ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ ೩೦ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ  ಇವರು, ಸಾಕಷ್ಟು ಹಿಟ್ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ವರ್ಷಗಳ ಹಿಂದೆ ಬಹುಬೇಡಿಕೆಯ ನಟಿಯಾಗಿದ್ದ ಸಿರಿಜಾ, ಏಕಕಾಲಕ್ಕೆ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದ ದಾಖಲೆಯಿದೆ. ಸಿರಿಜಾ ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರವಾಹಿಯಲ್ಲಿ ನಟಿಸಿದ್ದರು. ಆದರೆ, ಈ ನಟಿ ಇನ್ನೂ ಮದುವೆಯಾಗಿಲ್ಲ. ಇವರು ಒಳ್ಳೆಯ ಹುಡುಗ ಸಿಗಲಿ ಅಂತ ಕಾಯುತ್ತಿದ್ದಾರೆ. 

 


ರಜನಿ ಗೌಡ

ನಟಿ ರಜನಿ ಕೂಡ ಇನ್ನೂ ಮದುವೆಯಾಗಿಲ್ಲ. 2012ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿಕೊಟ್ಟ ಈ ನಟಿ, ಸದ್ಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಅಂಬುಜ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಜೊತೆಗೆ ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಕುಕ್ಕರಿ ಎಂಬ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು. ರಜಿನಿ ಮದುವೆ ಬಗ್ಗೆ ಅಷ್ಟಾಗಿ ಚರ್ಚೆ ಮಾಡೋದಿಲ್ಲ. 

കൂടുതല്‍ കാണാം

ವೈಷ್ಣವಿ ಗೌಡ

ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟಿ ವೈಷ್ಣವಿ ಈಗ 31 ವರ್ಷ ವಯಸ್ಸು. ಇವರು ಮದುವೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ, ಒಳ್ಳೆಯ ಹುಡುಗನಿಗಾಗಿ ಕಾಯುತ್ತಿದ್ದಾರೆ. 

 

കൂടുതല്‍ കാണാം


ಅನುಪಮಾ ಗೌಡ

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಕನ್ನಡ ಹಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ಅನುಪಮಾ ಗೌಡ, ನಂತರ ಅಕ್ಕ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಿತರಾದರು. ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಹಿಸುವುದರ ಮೂಲಕ ಸೈ ಎನಿಸಿಕೊಂಡರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿ, ಎಲ್ಲರ ಮನೆ ಮಾತಾದರು. ಸದ್ಯ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತರುವ ಅನುಪಮಾ ಅವರಿಗೆ ಈಗ 32 ವರ್ಷ. ಆದರೆ, ಅವರು ಮದುವೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. 

 

കൂടുതല്‍ കാണാം

ನವ್ಯಾ ಸ್ವಾಮಿ

ಲಕುಮಿ  ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾದ ನವ್ಯಾ ಸ್ವಾಮಿ ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಸ್ವಯಂವರ ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಈ ನಟಿಗೆ ಈಗ 33 ವರ್ಷ ವಯಸ್ಸು ಆದರೂ ಕೂಡ ಇನ್ನೂ ಮದುವೆಯಾಗಿಲ್ಲ. ಆದರೆ, ಅವರ ಅಭಿಮಾನಿಗಳು ಸಹನಟನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿರುತ್ತಾರೆ. 

 


ಅನುಶ್ರೀ

ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಅನುಶ್ರೀ ಹೋದಲೆಲ್ಲಾ ಅವರ ಅಭಿಮಾನಿಗಳು ಆಗಾಗ ಪ್ರಶ್ನೆ ಕೇಳುತ್ತಿರುತ್ತಾರೆ. ಆದರೆ, ಅನುಶ್ರೀ ಈ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ನಟಿ, ನಿರೂಪಕಿಯಾಗಿರುವ ಇವರಿಗೆ ಈಗ 36 ವರ್ಷ ವಯಸ್ಸು. ಸಂದರ್ಶನವೊಂದರಲ್ಲಿ ಅನುಶ್ರೀ ನನಗೆ ಮದುವೆ ಇಷ್ಟವಿಲ್ಲ ಎಂದಿದ್ದರು. 

 

കൂടുതല്‍ കാണാം

ದೀಪಿಕಾ ದಾಸ್

2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದ ದೀಪಿಕಾ ದಾಸ್, ತಮ್ಮ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ.  ಕೆಲ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿರುವ ದೀಪಿಕಾಗೆ ಈಗ 30 ವರ್ಷ ವಯಸ್ಸು. ಆದರೂ ಕೂಡ ಮದುವೆಯಾಗಿಲ್ಲ. ದೀಪಿಕಾ ಸದ್ಯ ಯಾವುದೇ ಸಿನಿಮಾ ಹಾಗೂ ಧಾರವಾಹಿಗಳಲ್ಲಿಯೂ ನಟಿಸುತ್ತಿಲ್ಲ. ಆಗಾಗ ಟ್ರಾವೆಲ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.   

 

കൂടുതല്‍ കാണാം


ಮಲೈಕಾ ಟಿ ವಸುಪಾಲ್

ಜೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿರುವ ನಟಿ ಮಲೈಕಾ ವಸುಪಾಲ್, ಎಡವಟ್ಟು ರಾಣಿ ಲೀಲಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ದಾವಣಗೆರೆ ಮೂಲದ ಚೆಲುವೆಗೆ ಬಾಲ್ಯದಿಂದಲೂ ನಟನೆ ಅಂದರೆ ಪ್ರಾಣ. ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಈ ನಟಿಗೆ ಈಗ 30 ವರ್ಷ ವಯಸ್ಸು. ಇವರು ಕೂಡ ಮದುವೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. 

 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+