X
ഹോം ടോപ് ലിസ്റ്റിങ്ങ്‌

ಅದ್ಧೂರಿತನಕ್ಕೆ ಬ್ರೇಕ್ ಹಾಕಿ ಸರಳವಾಗಿ ಮದುವೆಯಾದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿವರು!

Author: Sowmya Bairappa | Updated: Thursday, February 20, 2025, 09:57 AM [IST]

ಸಿನಿಮಾ ತಾರೆಯರ ಮದುವೆಯೆಂದರೆ ಕೇಳುವುದೇ ಬೇಡ. ಅಲ್ಲಿ ಆಡಂಬರ, ಅದ್ಧೂತನ ಜೋರಾಗಿಯೇ ಇರುತ್ತದೆ. ಮದುವೆ ಎಂಬುದು ಜೀವನದಲ್ಲಿ ಇಂದು ಬಾರಿ ನಡೆಯುವಂಥದ್ದು. ಹೀಗಾಗಿ, ಅದನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕೆಂಬುದು ಹಲವರ ಆಸೆ. ಸೆಲೆಬ್ರಿಟಿಗಳ ಮದುವೆಯಲ್ಲಿ ಅವರು ತೊಡುವ ಕಾಸ್ಟ್ಯೂಮ್‌ನಿಂದ ಹಿಡಿದು ಎಲ್ಲವೂ ದುಬಾರಿ ಬೆಲೆಯುಳ್ಳವಾಗಿರುತ್ತವೆ. ಆದರೆ, ಕೆಲ ಸೆಲೆಬ್ರಿಟಿಗಳು ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಿದ್ದಾರೆ. ಅಂತಹ ತಾರೆಯರ ಪಟ್ಟಿ ಇಲ್ಲಿದೆ.

Share:
cover image
ಚೇತನ್ ಕುಮಾರ್
1

ನಟನೆ ಜೊತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವ ನಟ ಚೇತನ್, 2020ರ ಫೆಬ್ರವರಿ 1ರಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಸಬ್‌ ರಿಜಿಸ್ಟ್ರರ್ ಕಚೇರಿಯಲ್ಲಿ ಮೇಘಾ ಎಂಬುವವರೊಂದಿಗೆ ರಿಜಿಸ್ಟ್ರರ್ ಮ್ಯಾರೇಜ್ ಆದರು. ಮೇಘಾ ಅಸ್ಸಾಂ ಮೂಲದವರಾಗಿದ್ದು, ಸದ್ಯ ಇವರಿಬ್ಬರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

കൂടുതല്‍ കാണാം


ಶುಭ ಪೂಂಜಾ
2

ಸ್ಯಾಂಡಲ್‌ವುಡ್‌ನ ಮುದ್ದು ಮುಖದ ಚೆಲುವೆ ಶುಭಾ ಪೂಂಜಾ, 2020ರ ಡಿಸೆಂಬರ್ 10ರಂದು ಮಂಗಳೂರು ಮೂಲದ ಉದ್ಯಮಿ ಸುಮಂತ್ ಬಿಲ್ಲವ ಎಂಬುವವರನ್ನು ಮದುವೆಯಾದರು. ಇವರಿಬ್ಬರ ವಿವಾಹ ಶುಭಾ ಪೂಂಜಾ ಅವರ ಹುಟ್ಟೂರಿನ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು.

കൂടുതല്‍ കാണാം

ಪ್ರಣಿತಾ ಸುಭಾಷ್
3

ಕನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ 2021ರ ಮೇ 30ರಂದು ಉದ್ಯಮಿ ನಿತಿನ್ ರಾಜು ಎಂಬುವವರನ್ನು ವಿವಾಹವಾಗಿದ್ದರು. ಇವರಿಬ್ಬರ ಮದುವೆ ಕನಕಪುರ ರಸ್ತೆಯ ರೆಸಾರ್ಟ್‌ ಒಂದರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿತ್ತು. ಆ ಮೂಲಕ ಪ್ರಣೀತಾ ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದ್ದರು.

കൂടുതല്‍ കാണാം


ದರ್ಶನ್
4

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 2000ನೇ ಇಸವಿಯ ಮೇ 14ರಂದು  ವಿಜಯಲಕ್ಷ್ಮೀ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರದ್ದು ಲವ್ ಮ್ಯಾರೇಜ್. ಈ ಸಂದರ್ಭದಲ್ಲಿ ದರ್ಶನ್ ಪೋಷಕ ಕಲಾವಿದನಾಗಿದ್ದರೇ, ಹೊರತು ನಾಯಕನಟನಾಗಿರಲಿಲ್ಲ. ಅಂದ್ಹಾಗೆ ಇವರಿಬ್ಬರ ವಿವಾಹ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನಡೆದಿತ್ತು. ಮದುವೆ ಬಳಿಕ ಬೆಂಗಳೂರಿನಲ್ಲಿ ಸರಳವಾಗಿ ಆರತಕ್ಷತೆ ಮಾಡಿಕೊಂಡಿದ್ದರು.

കൂടുതല്‍ കാണാം

ಗಣೇಶ್
5

ಗೋಲ್ಡನ್ ಸ್ಟಾರ್ ಗಣೇಶ್ 2008ರ ಫೆಬ್ರವರಿ 11ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶಿಲ್ಪಾ ಅವರನ್ನು ಸರಳವಾಗಿ ಮದುವೆಯಾಗಿದ್ದರು. ಗಣೇಶ್ ಮದುವೆ ಅವರ ಫ್ಯಾನ್ಸ್‌ಗೆ  'ಹಾರ್ಟ್ ಬ್ರೇಕಿಂಗ್ ನ್ಯೂಸ್' ಆಗಿತ್ತು. ದಿಢೀರ್ ಅಂತ ಮದುವೆ ಆಗಿ ನಟ ಗಣೇಶ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

കൂടുതല്‍ കാണാം


ಶ್ರುತಿ ಹರಿಹರನ್
6

ನಟಿ ಶೃತಿ ಹರಿಹರನ್ ಮೀಟೂ ಪ್ರಕರಣದ ಮೂಲಕ ಸದ್ದು ಮಾಡಿದ್ದರು. ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅರ್ಜುನ್ ಸರ್ಜಾ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿಯೇ ತಮ್ಮ ಬಹುಕಾಲದ ಗೆಳೆಯ ಡ್ಯಾನ್ಸರ್​ ರಾಮ್​ರೊಂದಿಗೆ ಸೀಕ್ರೆಟ್ ಆಗಿ ವಿವಾಹವಾಗಿದ್ದರು.

കൂടുതല്‍ കാണാം

ಸಂಜನಾ ಗಲ್ರಾನಿ
7

ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈ ವೇಳೆ ಸಂಜನಾ ರಹಸ್ಯವಾಗಿ ಮದುವೆಯಾಗಿರುವುದು ಹೊರಬಂದಿತ್ತು.  ಆದರೆ, ಆ ಸಂದರ್ಭದಲ್ಲಿ ಸಂಜನಾ ತಮ್ಮ ಮದುವೆ ವಿಚಾರವನ್ನು ಅಲ್ಲಗೆಳೆದಿದ್ದರು. ನಂತರ ತಮ್ಮ ಮದುವೆ ವಿಚಾರ ಬಿಚ್ಚಿಟ್ಟಿದ್ದರು. ಲಾಕ್‌ಡೌನ್ ವೇಳೆ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ ಎಂದಿದ್ದರು.  ಸಂಜನಾ ವೈದ್ಯ ಅಜೀಜ್ ಜೊತೆ ಮದುವೆಯಾಗಿದ್ದಾರೆ. ಅಜೀಜ್ ಖಾಸಗಿ ಆಸ್ಪತ್ರೆಯಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಆಗಿದ್ದಾರೆ.


കൂടുതല്‍ കാണാം


ಸತೀಶ್ ನೀನಾಸಂ
8

ನಟ ನೀನಾಸಂ ಸತೀಶ್ ಕೂಡ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ತುಮಕೂರಿನ ಶಿರಾದ ಹುಡುಗಿ ಸುಪ್ರೀತಾ ಎಂಬುವವರ ಜೊತೆ ಮದುವೆಯಾಗಿದ್ದರು. ಇವರ ಮದುವೆ ವಿಷಯ ಯಾರಿಗೂ ತಿಳಿದಿರಲಿಲ್ಲ. ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ ಬಳಿಕ ಸತೀಶ್ ಮದುವೆ ವಿಚಾರವನ್ನು ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದರು. ಮಗಳಿಗೆ 5 ವರ್ಷ ತುಂಬಿದಾಗ ಮಗಳ ಫೋಟೊ ಹಂಚಿಕೊಂಡಿದ್ದರು.  

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+