X
ഹോം ടോപ് ലിസ്റ്റിങ്ങ്‌

ಬಾಲ ಕಲಾವಿದರಾಗಿ ಎಂಟ್ರಿಕೊಟ್ಟು ಹೀರೋ-ಹೀರೋಯಿನ್ ಆದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿವರು!

Author: Sowmya Bairappa | Updated: Thursday, April 3, 2025, 09:56 AM [IST]

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಬಾಲ ಕಲಾವಿದರು ಮಿಂಚಿದ್ದಾರೆ. ಈಗಿನವರು ಬಹುತೇಕ ನಿಮಗೆ ಗೊತ್ತಿದೆ. ಆದರೆ, ಕೆಲ ವರ್ಷಗಳ ಹಿಂದೆ ಬಾಲನಟರಾಗಿ ಮಿಂಚಿದ್ದ ಕಲಾವಿದರು ಈಗ ಹೇಗಿದ್ದಾರೆ ಎಂಬ ಕುತೂಹಲವಿರುತ್ತೆ. ಈ ಪೈಕಿ ಕೆಲವರು ನಟನಾ ಕ್ಷೇತ್ರದಲ್ಲೇ ಮುಂದುವರೆದರೆ, ಇನ್ನೂ ಕೆಲವರು ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಬಾಲ ಕಲಾವಿದರಾಗಿ ಎಂಟ್ರಿಕೊಟ್ಟು ಹೀರೋ-ಹೀರೋಯಿನ್ ಆದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ವಿಜಯ್ ರಾಘವೇಂದ್ರ
1

ಕನ್ನಡದಲ್ಲಿ ಚಿನ್ನಾರಿ ಮುತ್ತ ಅಂತಲೇ ಖ್ಯಾತಿ ಪಡೆದ ವಿಜಯ್ ರಾಘವೇಂದ್ರ ಬಾಲನಟರಾಗಿ ಗುರುತಿಸಿಕೊಂಡವರು. ಇವರು ಚಲಿಸುವ ಮೋಡಗಳು, ಪರಶುರಾಮ್, ಅರಳಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರ ಶ್ರೀಮೂಕಾಂಬಿಕ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು (ನ್ಯಾಷನಲ್ ಅವಾರ್ಡ್), ಸ್ವಾಮಿ ವಿವೇಕಾನಂದ ಸಿನಿಮಾಗಳಲ್ಲಿ ಬಾಲನಟನಾಗಿ ಅದ್ಭುತವಾಗಿ ನಟಿಸಿದ್ದರು. ನಂತರ ನಿನಗಾಗಿ ಮೂಲಕ ನಾಯಕನಾಗಿ ಚಂದನವನ ಪ್ರವೇಶಿಸಿದ ಇವರು, ಇಂದಿಗೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ. 

കൂടുതല്‍ കാണാം


ಅಮೂಲ್ಯ
2

ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಬಾಲನಟಿಯಾಗಿ. ಇವರು, ಪರ್ವ, ಚಂದು, ಲಾಲಿಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜನಿ, ನಮ್ಮ ಬಸವ, ಕಲ್ಲರಳಿ ಹೂವಾಗಿ, ತನನಂ ತನನಂ, ತಿಮ್ಮ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆದ ಇವರು, ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಮದುವೆ ಬಳಿಕ ನಟನೆಯಿಂದ ದೂರ ಉಳಿದಿರುವ ಇವರ ಕಂಬ್ಯಾಕ್‌ಗಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

കൂടുതല്‍ കാണാം

ಬೇಬಿ ಶ್ಯಾಮಿಲಿ
3

ಬೇಬಿ ಶ್ಯಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ. 90ರ ದಶಕದಲ್ಲಿ ಎಲ್ಲರ ನೆಚ್ಚಿನ ಬಾಲನಟಿ ಈಕೆ. ಮತ್ತೆ ಹಾಡಿತು ಕೋಗಿಲೆ, ಭೈರವಿ, ಶಾಂಭವಿ, ದಾಕ್ಷಾಯಿಣಿ, ಶ್ವೇತಾಗ್ನಿ, ಪೊಲೀಸ್ ಲಾಕಪ್, ಕಾದಂಬರಿ, ಮಕ್ಕಳ ಸಾಕ್ಷಿ, ಹೂವು ಹಣ್ಣು, ಚಿನ್ನ ನೀನು ನಗುತಿರು, ಕರುಳಿನ ಕುಡಿ, ಜಗದೀಶ್ವರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಬಾಲನಟಿಯಾಗಿ ಸೂಪರ್ ಸಕ್ಸಸ್ ಕಂಡ ಈ ನಟಿ, ಹೀರೋಯಿನ್ ಆಗಿ ಗೆಲ್ಲಲಿಲ್ಲ. ಇವರು ನಾಯಕಿಯಾಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಯಾವುದೂ ಯಶಸ್ವಿಯಾಗಲಿಲ್ಲ.  


ವಿನಯ್ ರಾಜ್ ಕುಮಾರ್
4

ರಾಘವೇಂದ್ರ ರಾಜ್‌ಮಾರ್ ಅವರ ಪುತ್ರನಾದ ವಿನಯ್ ರಾಜ್‌ಕುಮಾರ್ ಅವರು  ತಾತ ಡಾ.ರಾಜ್‌ಕುಮಾರ್ ಅಭಿನಯದ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದರು.  2015ರಲ್ಲಿ ಸಿದ್ದಾರ್ಥ್ ಸಿನಿಮಾ ಮೂಲಕ ಹೀರೋ ಆಗಿ ಚೆಂದನವನ ಪ್ರವೇಶಿಸಿದ ಇವರು, ಸದ್ಯ ಕನ್ನಡ ಸಿನಿಮಾರಂಗದಲ್ಲಿ ನಾಯಕ ನಟರಾಗಿ ಮಿಂಚುತ್ತಿದ್ದಾರೆ.


കൂടുതല്‍ കാണാം

ಪುನೀತ್ ರಾಜ್‌ಕುಮಾರ್
5

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆರು ತಿಂಗಳ ಮಗು ಆಗಿರುವಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಹೊಸ ಬೆಳಕು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂ, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್ ಮುಂತಾದ ಸಿನಿಮಾಗಳಲ್ಲಿ ಬಾಲನಟರಾಗಿ ಮಿಂಚಿದ್ದರು. ನಂತರ 2002ರಲ್ಲಿ ಅಪ್ಪು ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಪವರ್ ಸ್ಟಾರ್, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

കൂടുതല്‍ കാണാം


ಅನು ಪ್ರಭಾಕರ್
6

ನಟಿ ಹಾಗೂ ಕಂಠದಾನ ಕಲಾವಿದೆ ಗಾಯಿತ್ರಿ ಅವರ ಮಗಳಾದ ಅನು ಪ್ರಭಾಕರ್, ನಾಯಕಿಯಾಗುವುದಕ್ಕೂ ಮುನ್ನ ಕನ್ನಡದ ಚಪಲ ಚೆನ್ನಿಗರಾಯ, ಸ್ವರ್ಣ ಸಂಸಾರ, ಶಾಂತಿ ಕ್ರಾಂತಿ ಹಾಗೂ ಇಂಗ್ಲಿಷ್‌ನ್ ಡಾರ್ಕ್ ಜಂಗಲ್ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ನಂತರ  1999ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ಅಭಿನಯದ 'ಹೃದಯ ಹೃದಯ' ಮೂಲಕ ಹೀರೋಯಿನ್ ಆಗಿ ಮೋಡಿ ಮಾಡಿದರು.
 

കൂടുതല്‍ കാണാം

ಸುಧಾರಾಣಿ
7

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುಧಾರಾಣಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಮೂರನೇ ವಯಸ್ಸಿಗೆ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದ ಈ ನಟಿ, ನಂತರ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+