X
ഹോം ടോപ് ലിസ്റ്റിങ്ങ്‌

ಈ ಬಾರಿ ವೀಕೆಂಡ್ ವಿತ್ ರಮೇಶ್‌ಗೆ ಇಬ್ಬರು ಅತಿಥಿಗಳು: ಒಬ್ಬರು ಅಪ್ಪಟ ದೇಸಿ ಕವಿ, ಇನ್ನೊಬ್ಬರು ಹಿರಿಯ ನಟ!

Author: Sowmya Bairappa | Published: Friday, May 26, 2023, 08:44 PM [IST]

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈವರೆಗೆ ಹಲವು ಸೆಲೆಬ್ರಟಿಗಳು ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಕುರಿತು ತಿಳಿಸಿದ್ದಾರೆ. ಪ್ರತಿವಾರ ಒಬ್ಬರು ಅಥವಾ ಇಬ್ಬರು ಸಾಧಕರನ್ನು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಖಲಾಗುತ್ತೆ. ಪ್ರತಿಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರುವ ಗೆಸ್ಟ್‌ಗಳ ಬಗ್ಗೆ ವೀಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ಈ ವಾರದ ಇಬ್ಬರು ಅತಿಥಿಗಳು ಬರುತ್ತಿದ್ದಾರೆ. ಅವರ ಯಾರು ಎಂಬ ಮಾಹಿತಿ ಇಲ್ಲಿದೆ.

Share:
cover image
ಜೈ ಜಗದೀಶ್
1

ವೀಕೆಂಡ್ ವಿತ್ ರಮೇಶ್‌ಗೆ ಎರಡನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಮತ್ತು ನಿರ್ದೇಶಕ ಜೈ ಜಗದೀಶ್ ಬರುತ್ತಿದ್ದಾರೆ. 1976ರಲ್ಲಿ ಫಲಿತಾಂಶ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಜೈ ಜಗದೀಶ್, ನಾಯಕನಟನಾಗಿ, ಪೋಷಕನಟನಾಗಿ, ಖಳನಟನಾಗಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ,ನಿರ್ದೇಶಕಿಯಾಗಿ ಪ್ರಸಿದ್ಧರಾಗಿದ್ದಾರೆ. `ಭೂಮಿ ತಾಯಿಯ ಚೊಚ್ಚಲ ಮಗ' ಚಿತ್ರದಿಂದ ನಿರ್ಮಾಪಕರಾದ ಇವರು, ಆದಿತ್ಯ ಅಭಿನಯದ`ಮದನ' ಚಿತ್ರದಿಂದ ನಿರ್ದೇಶಕರಾದರು. ಪಡುವಾರಹಳ್ಳಿ ಪಾಂಡವರು, ಗಾಳಿ ಮಾತು, ಬೆಂಕಿಯಲ್ಲಿ ಅರಳಿದ ಹೂವು, ಬಂಧನ ಇವರ ಪ್ರಮುಖ ಚಿತ್ರಗಳು.

 

കൂടുതല്‍ കാണാം


ಕಿರುತೆರೆ
2

ಜೈ ಜಗದೀಶ್ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಸಕ್ರಿಯವಾಗಿದ್ದಾರೆ. ಕಸ್ತೂರಿ ನಿವಾಸ, ಅರಮನೆ, ಮನಸಾರೆ, ಜೊತೆ ಜೊತೆಯಲಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್‌ ಕನ್ನಡ ಸೀಸನ್ 7ರಲ್ಲೂ ಭಾಗವಹಿಸಿದ್ದರು. 

 

ಮೊದಲ ಅತಿಥಿ
3

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಅತಿಥಿ ಕನ್ನಡ ಕವಿ, ಸಾಹಿತಿ, ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಯಾದ ದೊಡ್ಡರಂಗೇಗೌಡರು ಆಗಮಿಸುತ್ತಿದ್ದಾರೆ. ಇವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.  ಜೊತೆಗೆ ಚಲನಚಿತ್ರ ಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತಾ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ದೊಡ್ಡರಂಗೇಗೌಡರು ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಹೆಸರುವಾಸಿಯಾಗಿದ್ದಾರೆ. 


ವೈಯಕ್ತಿಕ ಜೀವನ
4

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 1946ರ ಫೆಬ್ರವರಿ 7ರಂದು ಜನಿಸಿದ ದೊಡ್ಡರಂಗೇಗೌಡರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಕನ್ನಡ ನವೋದಯ ಕಾವ್ಯ-ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದರು. ೧೯೭೨ರಿಂದ ೨೦೦೪ರವರೆಗೆ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿಯಿರು ಎಸ್‌.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಶೇಷಾದ್ರಿಪುರಂ ಕಾಲೇಜಿನಲ್ಲೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 

 

ಪ್ರೋಮೋ ರಿಲೀಸ್
5

ಪ್ರತಿವಾರ ಮಂಗಳವಾರ ಅಥವಾ ಬುಧವಾರ ಸಾಧಕರ ಪ್ರೋಮೋ ರಿಲೀಸ್ ಮಾಡುತ್ತಿದ್ದ ಜೀ ಕನ್ನಡ ವಾಹಿನಿ ಈ ಬಾರಿ ಲೇಟ್ ಆಗಿ ರಿಲೀಸ್ ಮಾಡಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವೀಕ್ಷಕರು ಈ ಬಾರಿ ಯಾರು ಇಲ್ಲವೇನೋ ಎಂದು ಭಾವಿಸಿದ್ದರು. ಆದರೆ, ಶನಿವಾರ ದೊಡ್ಡರಂಗೇಗೌಡರು ಹಾಗೂ ಜೈಗಜಗದೀಶ್ ಅವರ ಪ್ರೋಮೋ ರಿಲೀಸ್ ಮಾಡಿದೆ. 


ಹಿಂದಿನ ವಾರ ಯಾರಿದ್ದರು?
6

ಹಿಂದಿನ ವಾರ  ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ ಅತಿಥಿಯಾಗಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿನ 1,000ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್ ಆಗಮಿಸಿದ್ದರು. ಸುಮಾರು 500ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಗೌರವಕ್ಕೆ ಪ್ರಾಪ್ತರಾದ  ವಿ. ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+