X
ഹോം ടോപ് ലിസ്റ്റിങ്ങ്‌

ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿಕೊಂಡ ಸ್ಯಾಂಡಲ್‌ವುಡ್‌ನ ಟಾಪ್ ನಟರ ಪಟ್ಟಿ ಇಲ್ಲಿದೆ.

Author: Sowmya Bairappa | Published: Friday, April 21, 2023, 03:46 PM [IST]

ಸ್ಯಾಂಡಲ್‌ವುಡ್‌ನ ಹಲವಾರು ಕಲಾವಿದರು ನಟನೆ ಮತ್ತು ನಿರ್ದೇಶಕರಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆ ಜೊತೆಗೆ ತಮ್ಮದೇ ಶೈಲಿಯಲ್ಲಿ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನೂ ಕೆಲ ನಟರು ತಮ್ಮ ಸಿನಿಮಾವನ್ನು ತಾವೇ ನಿರ್ದೇಶಿಸಿ, ನಟಿಸಿದ್ದಾರೆ. ಅಂತಹ ನಟರ ಪಟ್ಟಿ ಇಲ್ಲಿದೆ.

Share:
cover image
ಸುದೀಪ್
1

'ಕಿಚ್ಚ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ನಟ. ಸುದೀಪ್ ಕೇವಲ ನಟ ಮಾತ್ರ ಅಲ್ಲ, ಪ್ರತಿಭಾವಂತ ನಿರ್ದೇಶಕ ಕೂಡ. ಅಭಿನಯ ಚಕ್ರವರ್ತಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ಚಿತ್ರ ಮೈ ಆಟೋಗ್ರಾಫ್. ನಿರ್ದೇಶನ ಮಾತ್ರವಲ್ಲದೇ ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಕೂಡ ಮಾಡಿದ್ದರು. ಈ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದು 175 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ನಂತರ ಹಿಂದಿಯ ಬೇವರ್ಚಿ ಚಿತ್ರದ ರಿಮೇಕ್ ಆದ #73 ಶಾಂತಿನಿವಾಸ ಸಿನಿಮಾವನ್ನು ನಿರ್ದೇಶಿಸಿ ನಿರ್ಮಿಸಿದರು. ಆನಂತರದಲ್ಲಿ ತೆಲುಗು ವಿಕ್ರಮಾರ್ಕುಡು ರಿಮೇಕ್ ಆದ ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ ಸಿನಿಮಾಗಳನ್ನು  ನಿರ್ದೇಶಿಸಿ ನಟಿಸಿದ್ದರು. 

കൂടുതല്‍ കാണാം


ಕಾಶೀನಾಥ್
2

ಚಿತ್ರರಂಗದಲ್ಲಿನ ಮಡಿವಂತಿಕೆಗೆ ಮೊದಲ ಪೆಟ್ಟು ಕೊಟ್ಟ ನಿರ್ದೇಶಕ ಕಾಶಿನಾಥ್ ಎಂದರೆ ತಪ್ಪಾಗಲಾರದು. ಕಾಶಿನಾಥ್ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಪ್ರತಿಭೆ ತೋರಿ, ಕನ್ನಡದ ವಿಶಿಷ್ಟ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಇವರ ವಿಭಿನ್ನ ಶೈಲಿಯ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಇವರು 1984ರಲ್ಲಿ ಅನುಭವ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ತಾವೇ ನಾಯಕರಾಗಿ ಕಾಣಿಸಿಕೊಂಡರು. ಈ ಸಿನಿಮಾಗೆ ಯಶಸ್ಸು ಸಿಕ್ಕಿತು. ನಂತರ ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. 

 

കൂടുതല്‍ കാണാം

ಶಂಕರ್ ನಾಗ್
3

ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ಶಂಕರ್ ನಾಗ್ ನಿರ್ದೇಶನದ ಮೊದಲ ಸಿನಿಮಾ ಮಿಂಚಿನ ಓಟ. ಈ ಸಿನಿಮಾದಲ್ಲಿ ಅನಂತನಾಗ್ ಹಾಗೂ ಶಂಕರ್ ನಾಗ್ ಇಬ್ಬರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ನಂತರ ಜನುಮ ಜನುಮದ ಅನುಬಂಧ, ಗೀತಾ, ಹೊಸ ತೀರ್ಪು, ನೋಡಿ ಸ್ವಾಮಿ ನಾವಿರೋದೆ ಆಕ್ಸಿಡೆಂಟ್ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿದರು. 1984ರಲ್ಲಿ  ಬಿಡುಗಡೆಯಾದ ಇವರು ನಿರ್ದೇಶಿಸಿ, ನಟಿಸಿದ ಆಕ್ಸಿಡೆಂಟ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕ್ಕಿತ್ತು.

 

കൂടുതല്‍ കാണാം


ಉಪೇಂದ್ರ
4

ಕನ್ನಡದ ಹೆಸರಾಂತ ನಿರ್ದೇಶಕ  ಕಾಶಿನಾಥ್ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಟ ಉಪೇಂದ್ರ 1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ, ತಾವೇ ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಇದಾದ ಬಳಿಕ ಬಂದ 'ಉಪೇಂದ್ರ' ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು. ನಂತರ 2010ರಲ್ಲಿ  'ಸೂಪರ್' ಮತ್ತು 2015ರಲ್ಲಿ 'ಉಪ್ಪಿ 2' ಚಿತ್ರಗಳನ್ನು ನಿರ್ದೇಶಿಸಿ, ನಟಿಸಿದರು. ಈ ಎರಡು ಚಿತ್ರಗಳು ಶತದಿನ ಪೂರೈಸಿದವು. ಸದ್ಯ ಯು ಅಂಡ್ ಐ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. 

 

കൂടുതല്‍ കാണാം

ರಿ‍ಷಭ್ ಶೆಟ್ಟಿ
5

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಿ‍ಷಭ್ ಶೆಟ್ಟಿ, ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿ, ನಟಿಸಿದ ಮೊದಲ ಸಿನಿಮಾ ಬೆಲ್ ಬಾಟಮ್. ಬಳಿಕ  ಕಾಂತಾರಾ ಸಿನಿಮಾಗೆ ಆಕ್ಷನ್ ಕಟ್ ಹೇಳಿ ನಟಿಸಿದರು. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು, ರಿಷಬ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 

 

കൂടുതല്‍ കാണാം


ರವಿಚಂದ್ರನ್
6

ರವಿಚಂದ್ರನ್ ಅವರು ಬಹುಮುಖ ಪ್ರತಿಭೆ. ನಟನೆ, ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ರವಿಚಂದ್ರನ್ ನಿರ್ದೇಶಿಸಿ. ನಟಿಸಿದ ಮೊದಲ ಸಿನಿಮಾ  ಪ್ರೇಮಲೋಕ. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ  ರಣಧೀರ, ಕಿಂದರಜೋಗಿ, ಶಾಂತಿ ಕ್ರಾಂತಿ, ಹಳ್ಳಿ ಮೇಷ್ಟ್ರು, ಮನೆ ದೇವ್ರು, ಗೋಪಿ ಕೃಷ್ಣ, ಪುಟ್ನಂಜ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿದರು. 

 

കൂടുതല്‍ കാണാം

ರಾಜ್ ಬಿ ಶೆಟ್ಟಿ
7

ರಾಜ್ ಬಿ ಶೆಟ್ಟಿ  2017ರಲ್ಲಿ ತೆರೆಕಂಡ `ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ 2022ರಲ್ಲಿ ತೆರೆಕಂಡ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದರು. ಈ ಚಿತ್ರ ಅವರಿಗೆ ಸಾಕಷ್ಟು ಯಶಸ್ಸು ತಂದು ಕೊಟ್ಟಿತು.  ಹೀಗೂ ರೌಡಿಸಂ ಸಿನಿಮಾ ಮಾಡಬಹುದು ಎಂಬುದನ್ನು ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ರಾಜ್​ ಬಿ ಶೆಟ್ಟಿ ತೋರಿಸಿಕೊಟ್ಟಿದ್ದರು. 

 

കൂടുതല്‍ കാണാം


ಪ್ರೇಮ್
8

ಪ್ರೇಮ್ ಬರೆದು ನಿರ್ದೇಶಿಸಿದ ಸಿನಿಮಾ 'ಈ ಪ್ರೀತಿ ಏಕೆ ಭೂಮಿ ಮೇಲಿದೆ'. ಈ ಸಿನಿಮಾ ಮೂಲಕ ಅವರು ನಟನೆಗೂ ಪದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್  ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. 

കൂടുതല്‍ കാണാം

ಡಾರ್ಲಿಂಗ್ ಕೃಷ್ಣ
9

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಸಿನಿಮಾ ಲವ್ ಮಾಕ್ಟೇಲ್. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು, ಇಂದಿಗೂ ಆದಿ ಮತ್ತು ನಿಧಿಮಾ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಲವ್ ಮಾಕ್ಟೇಲ್ ಸಾಮಾನ್ಯ ಯುವಕನೊಬ್ಬನ ಜೀವನದ ಹಲವು ಹಂತಗಳಲ್ಲಿ ಎದುರಾಗುವ ಪ್ರೀತಿಯ ಕಥೆಯನ್ನು ಡಾರ್ಲಿಂಗ್ ಕೃಷ್ಣ ಹೆಣೆದಿದ್ದರು. 2020ರ ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಗೆ ಒಳ್ಳೆಯ ಯಶಸ್ಸು ಸಿಕ್ಕಿತ್ತು.  

 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+