X
ഹോം ടോപ് ലിസ്റ്റിങ്ങ്‌

ಅಪಘಾತದಲ್ಲಿ ಮರಣ ಹೊಂದಿದ ಸ್ಯಾಂಡಲ್‌ವುಡ್‌ ನಟ-ನಟಿಯರ ಪಟ್ಟಿ ಇಲ್ಲಿದೆ.

Author: Sowmya Bairappa | Updated: Thursday, July 27, 2023, 05:33 PM [IST]

ಇಂದು ಕನ್ನಡ ಚಿತ್ರರಂಗ ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಹಲವಾರು ಕಲಾವಿದರ ಅವಿಸ್ಮರಣೀಯ ಕೊಡುಗೆ ಕಾರಣ. ಕನ್ನಡದ ಹಲವಾರು ನಟರು ಅಭೂತಪೂರ್ವ ಸಾಧನೆ ಮಾಡಿ, ತಮ್ಮ ಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗವನ್ನು ಅಗಲಿದ್ದಾರೆ. ಆದರೆ, ಕಲಾವಿದನಿಗೆ ಎಂದು ಸಾವಿಲ್ಲ ಎಂಬಂತೆ ಸಿನಿಮಾಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಇಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಕನ್ನಡ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ഉള്ളടക്ക പട്ടിക
ಶಂಕರ್ ನಾಗ್

ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. ಕೇವಲ 35 ವಯಸ್ಸಿನಲ್ಲೇ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್‌, ಅಚಾನಕವಾಗಿ ನಮ್ಮನ್ನು ಆಗಲಿದರು.1990 ಸೆಪ್ಟೆಂಬರ್ 30ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದ ಬಳಿ ಅಪಘಾತಕ್ಕೀಡಾಗಿ ಶಂಕರನಾಗ್ ನಿಧನರಾದರು. 

കൂടുതല്‍ കാണാം


ಸುನೀಲ್

ಸುನೀಲ್ ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ಸುನೀಲ್ 90ರ ದಶಕದ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು. 1990 ರಿಂದ 1994 ರವರೆಗೆ ಸಿನಿರಂಗದಲ್ಲಿ ಸಕ್ರಿಯವಾಗಿದ್ದ ಸುನೀಲ್ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಸಿನಿಪರದೆಯ ಮೇಲೆ ಸುನೀಲ್ ಮತ್ತು ಮಾಲಾಶ್ರೀ  ಆ ಕಾಲದ ಫೇವರೇಟ್ ಜೋಡಿಯಾಗಿತ್ತು. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಸುನೀಲ್, 1994 ಜುಲೈ 24ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಅಪಘಾತದಲ್ಲಿ ನಿಧನರಾದರು. ಮಾಲಾಶ್ರೀ ಪವಾಡ ಸದೃಶವಾಗಿ ಬದುಕುಳಿದಿದ್ದರು. 

 

കൂടുതല്‍ കാണാം

ಸೌಂದರ್ಯ

ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಕನ್ನಡ, ತೆಲುಗು,ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 1992ರಲ್ಲಿ ತೆರೆಕಂಡ ಕನ್ನಡದ `ಗಂಧರ್ವ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಸೌಂದರ್ಯ, ತೆಲಗು ಚಿತ್ರರಂಗಕ್ಕೆ ಹೋದ ಸೌಂದರ್ಯ ಅಲ್ಲಿ ಅಭೂತಪೂರ್ವ ಯಶಸ್ಸು ಕಂಡು 'ಆಧುನಿಕ ಮಹಾನಟಿ ಸಾವಿತ್ರಿ' ಎಂದೇ ಖ್ಯಾತಿ ಪಡೆದರು. ದಕ್ಷಿಣ ಚಿತ್ರರಂಗದ ಎಲ್ಲಾ ಟಾಪ್ ನಿರ್ದೇಶಕರೊಂದಿಗೆ ಮತ್ತು ನಟರೊಂದಿಗೆ ಕಾರ್ಯನಿರ್ವಹಿಸಿದ ಅವರು, ತಮ್ಮ 12 ವರ್ಷದ ಸಿನಿಪಯಣದಲ್ಲಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ಛಾಪು ಮೂಡಿಸಿದ್ದ ಸೌಂದರ್ಯ ತಮ್ಮ 27ನೇ ವಯಸ್ಸಿನಲ್ಲಿ ನಿಧನರಾದರು. ಸೌಂದರ್ಯ 2004ರ ಏಪ್ರಿಲ್‌  17ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು.    കൂടുതല്‍ കാണാം


ಸಂಚಾರಿ ವಿಜಯ್

ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಅದ್ಭುತ ನಟ. ಇವರು ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಕೆಲಸ ಮಾಡಿದ್ದರು.   62ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇವರ 'ನಾನು ಅವನಲ್ಲ ಅವಳು' ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು, ಇದರಲ್ಲಿ ಅವರು ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದರು. ಇವರ ಮತ್ತೊಂದು ಸಿನಿಮಾದ 'ಹರಿವು' ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಹೀಗೆ ಅವರು ಚಿತ್ರರಂಗದಲ್ಲಿ ಉತ್ತುಂಗಕ್ಕೇರುತ್ತಿರುವಾಗಲೇ 2021ರ ಜೂನ್ 12ರಂದು ರಾತ್ರಿ 11.30 ರ ಸುಮಾರಿಗೆ ಸ್ನೇಹಿತ್ ನವೀನ್ ಜೊತೆ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೆ ಒಳಗಾದರು. ಈ ವೇಳೆ ಮೆದುಳು ಮತ್ತು ಬಲ ತೊಡೆಗೆ ತೀವ್ರ ಪೆಟ್ಟಾಗಿದ್ದರಿಂದ ಜೂನ್ 15ರಂದು ನಿಧನರಾದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ವಿಜಯ್, ಕೊನೆಯುಸಿರೆಳೆಯುವಾಗಲೂ ತಮ್ಮ ಅಂಗಾಂಗಳ ದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದರು. 

കൂടുതല്‍ കാണാം

ಅನಿಲ್

ಆಗಷ್ಟೇ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿದ್ದ  ನಟರಾದ ಅನಿಲ್ ಹಾಗೂ ಉದಯ್ ಅವರು ದುನಿಯಾ ವಿಜಯ್ ಅವರ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾವನ್ನಪ್ಪಿದರು. 2016ರ ನವೆಂಬರ್‌ನಲ್ಲಿ ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಹೆಲಿಕಾಪ್ಟರ್‌ನಿಂದ ಕೆರೆಗೆ ಹಾರಿದ್ದ ಅನಿಲ್ ಹಾಗೂ ಉದಯ್ ಈಜಲಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+