X
ഹോം ടോപ് ലിസ്റ്റിങ്ങ്‌

ಲೀಲಾವತಿ to ಸ್ಪಂದನಾ: 2023ರಲ್ಲಿ ನಿಧನರಾದ ಕನ್ನಡ ಚಿತ್ರರಂಗದ ನಟ-ನಟಿಯರ ಪಟ್ಟಿ ಇಲ್ಲಿದೆ.

Author: Sowmya Bairappa | Published: Saturday, December 30, 2023, 11:18 AM [IST]

2023 ಕನ್ನಡ ಚಿತ್ರರಂಗಕ್ಕೆ ಲಕ್ಕಿ ವರ್ಷ ಅಲ್ಲವೇ ಅಲ್ಲ. ಯಾಕೆಂದರೆ, ಈ ವರ್ಷ ಚಂದನವನ ಹಲವು ಖ್ಯಾತ ಕಲಾವಿದರನ್ನು ಕಳೆದುಕೊಂಡು ಬಡವಾಗಿದೆ. ಹುಟ್ಟು ನಿಶ್ಚಿತ, ಸಾವು ಖಚಿತ ಅಂತ ಹೇಳಲಾಗುತ್ತೆ. ಅಂದರೆ ಹುಟ್ಟಿದವರು ಒಂದಲ್ಲ ಒಂದಿನ ಸಾಯಲೇಬೇಕು. ಆದರೆ, ಇನ್ನೂ ಬಾಳಿ ಬದುಕಬೇಕಾದ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿತ್ವಗಳು ಚಿಕ್ಕ ವಯಸ್ಸಿನಲ್ಲೇ ಅಗಲಿದರೆ ಆ ದುಃಖದಿಂದ ಹೊರಬರಲು ಸಾಧ್ಯವೇ ಇಲ್ಲ. ಇಲ್ಲಿ ಈ ವರ್ಷ ಇಹಲೋಕ ತ್ಯಜಿಸಿದ ಸ್ಯಾಂಡಲ್‌ವುಡ್‌ ಕಲಾವಿದರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಸ್ಪಂದನಾ ವಿಜಯ್ ರಾಘವೇಂದ್ರ

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ 2023ರ ಆಗಸ್ಟ್ 7ರಂದು ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. 28 ವರ್ಷದ ಸ್ಪಂದನಾ ಚಿಕ್ಕ ವಯಸ್ಸಿನಲ್ಲೇ ಅಗಲಿದ್ದು, ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿತ್ತು. ಸ್ಪಂದನಾ ತಮ್ಮ ಪತಿ ನಟಿಸಿರುವ `ಕಿಸ್ಮತ್' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಜೊತೆಗೆ 2016ರಲ್ಲಿ ತೆರೆಕಂಡ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.    കൂടുതല്‍ കാണാം


ಸಂಪತ್ ಜಯರಾಮ್

ಕನ್ನಡದ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಸಂಪತ್ ಜಯರಾಮ್, 2023ರ ಏಪ್ರಿಲ್ 22ರಂದು ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆಗಿನ್ನೂ ಅವರಿಗೆ 35 ವರ್ಷ ವಯಸ್ಸಾಗಿತ್ತು. ಸಂಪತ್ ಜಯರಾಮ್ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ (ಸನ್ನಿಧಿ) ಅಣ್ಣನ ಪಾತ್ರದ ಮೂಲಕ ಮನೆಮಾತಾಗಿದ್ದರು. ಇದರ ಜೊತೆಗೆ ಹಲವು ಧಾರಾವಾಹಿಗಳಲ್ಲಿ ಫೋಷಕ ಪಾತ್ರ ನಿರ್ವಹಿಸಿದ್ದರು. ಕೆಲ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಇವರ ಸಾವು ಕೂಡ ಚಿತ್ರರಂಗಕ್ಕೆ ಸಾಕಷ್ಟು ನೋವು ತಂದಿತ್ತು.  

 

കൂടുതല്‍ കാണാം

ಲೀಲಾವತಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು 2023ರ ಡಿಸೆಂಬರ್ 8ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.  ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದರು. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಅವರು, ಸರಳವಾಗಿ ಬದುಕುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು.  

 

കൂടുതല്‍ കാണാം


ಲಕ್ಷ್ಮಣ್

ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ 2023ರ ಜನವರಿ 23ರಂದು ಮೂಡಲಪಾಳ್ಯದ ನಿವಾಸದಲ್ಲಿ ಹೃದಯಘಾತದಿಂದ ನಿಧನರಾಗಿದ್ದರು. ಇವರು ರೆವಲ್ ಸ್ಟಾರ್ ಅಂಬರೀಶ್ ಸಿನಿಮಾಗಳಲ್ಲಿ ಖಾಯಂ ಪೋಷಕ ಕಲಾವಿದರಾಗಿದ್ದರು. ಜೊತೆಗೆ ಡಾ.ರಾಜ್‌ಕುಮಾರ್, ಶಂಕರ್‌ನಾಗ್‌, ಪ್ರಭಾಕರ್, ವಿಷ್ಣುವರ್ಧನ್, ಶಿವರಾಜ್‌ಕುಮಾರ್, ರವಿಚಂದ್ರನ್ ಸೇರಿದಂತೆ ಬಹುತೇಕ ನಟರ ಸಿನಿಮಾಗಳಲ್ಲಿ ಖಳನಟನಾಗಿ ಹಾಗೂ ಫೋಷಕ ನಟನಾಗಿ ಗಮನ ಸೆಳೆದಿದ್ದರು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಲಕ್ಷ್ಣಣ್ 74ನೇ ವಯಸ್ಸಿಗೆ ನಿಧನರಾದರು. 

 

കൂടുതല്‍ കാണാം

ಶರತ್ ಬಾಬು

ದಕ್ಷಿಣ ಚಿತ್ರರಂಗದ ಪ್ರಖ್ಯಾತ ನಟ ಶರತ್ ಬಾಬು 2023ರ ಮೇ 22ರಂದು ತೀವ್ರ ಅನಾರೋಗ್ಯದಿಂದ ನಿಧನರಾದರು. ಸುಮಾರು ನಾಲ್ಕು ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶರತ್ ಬಾಬು ಅವರು, ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ರಮೇಶ್ ಅರವಿಂದ್, ಸುಹಾಸಿನಿ ನಟಿಸಿದ್ದ 'ಅಮೃತ ವರ್ಷಿಣಿ' ಸಿನಿಮಾದಲ್ಲಿ ಹೇಮಂತ್ ಪಾತ್ರದಲ್ಲಿ ನಟಿಸಿ ಮನಗೆದ್ದಿದ್ದರು.  ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದರು. 

കൂടുതല്‍ കാണാം


ನಿತಿನ್ ಗೋಪಿ

ಹಲೋ ಡ್ಯಾಡಿ ಸಿನಿಮಾ ಖ್ಯಾತಿಯ ನಿತಿನ್ ಗೋಪಿ 2023ರ ಜೂನ್ 2ರಂದು ಇಹಲೋಕ ತ್ಯಜಿಸಿದರು. 39ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ನಿತಿನ್ ಪ್ರಖ್ಯಾತ ಕೊಳಲು ವಾದಕ ಗೋಪಿ ಅವರ ಪುತ್ರ. ಡಾ. ವಿಷ್ಣುವರ್ಧನ್ ಅವರ ಹಲೋ ಡ್ಯಾಡಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದರು. 

ಸಿ ವಿ ಶಿವಶಂಕರ್

ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಹಾಡು ಬರೆದ ಹಿರಿಯ ನಿರ್ಮಾಪಕ, ನಿರ್ದೇಶಕ ಸಿ.ವಿ.ಶಿವಶಂಕರ್ ಜೂನ್ 27ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು.  ಸ್ಕೂಲ್ ಮಾಸ್ಟರ್, ಕೃಷ್ಣ ಗಾರುಡಿ, ರತ್ನಮಂಜರಿ, ರತ್ನಮಂಜರಿ ರಹಸ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 

 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+