X
ഹോം ടോപ് ലിസ്റ്റിങ്ങ്‌

ನಾಯಕರಿಗೆ ಸಮನಾಗಿ ನಟಿಸಬಲ್ಲ ಸ್ಯಾಂಡಲ್‌ವುಡ್‌ನ 8 ಅದ್ಭುತ ಕಲಾವಿದರಿವರು!

Author: Sowmya Bairappa | Updated: Thursday, July 27, 2023, 05:36 PM [IST]

ಸಿನಿಮಾದಲ್ಲಿ ನಾಯಕ-ನಾಯಕಿಯರಷ್ಟೇ ಫೋಷಕ ಪಾತ್ರಗಳು ಮುಖ್ಯವಾಗಿರುತ್ತದೆ. ಪೋಷಕ ಪಾತ್ರವಿಲ್ಲದೇ ಒಂದು ಕಥೆ ಸಂಫೂರ್ಣವಾಗುದಿಲ್ಲ. ಕೆಲವೊಮ್ಮೆ ಪೋಷಕ ಪಾತ್ರಗಳೇ ಮುಖ್ಯ ಪಾತ್ರಗಳಿಗಿಂತ ಹೆಚ್ಚು ಜನಪ್ರಿಯವಾಗುತ್ತವೆ. ಅದಕ್ಕೆ ಕಾರಣ ಆ ಪಾತ್ರಗಳ ಅದ್ಭುತ ನಟನೆ. ಫೋಷಕ ನಟರು ಒಂದೊಂದು ಸಿನಿಮಾದಲ್ಲೂ ಭಿನ್ನ ಪಾತ್ರಗಳ ಮೂಲಕ ಸಿನಿರಸಿಕರ ಮನಗೆಲ್ಲುತ್ತಾರೆ. ಇಲ್ಲಿ ನಾಯಕನಟರಿಗೆ ಸಮನಾಗಿ ನಟಿಸಬಲ್ಲ ಕನ್ನಡ ಚಿತ್ರರಂಗದ ಕಲಾವಿದರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಅವಿನಾಶ್ ಯಳಂದೂರು

ಕನ್ನಡ ಚಿತ್ರರಂಗದ ಅದ್ಭುತ ಫೋಷಕ ನಟರಲ್ಲಿ ಅವಿನಾಶ್ ಕೂಡ ಒಬ್ಬರು. ಎರಡು ದಶಕಗಳಿಂದ ಚಂದನವನದಲ್ಲಿ ಸಕ್ರಿಯವಾಗಿರುವ ಅವರು, ಕನ್ನಡ, ತಮಿಳು ತೆಲಗು ಚಿತ್ರರಂಗದ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಕಲೆ ಅವಿನಾಶ್ ಅವರು, ತಮ್ಮ ಅದ್ಭುತ ನಟನೆಯ ಮೂಲಕ ಸಿನಿರಸಿಕರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವಿನಾಶ್ ನಾಯಕ ನಟರಿಗೆ ಸಮನಾಗಿ ನಟಿಸುವ ಸಾಮರ್ಥ್ಯವನ್ನು ಹೊಂದಿದ್ಶಾರೆ.

കൂടുതല്‍ കാണാം


ಉಮಾಶ್ರಿ

ಉಮಾಶ್ರೀ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ವಿಶೇಷ ಸ್ಥಾನ ಪಡೆದಿದ್ದಾರೆ. ಹಾಸ್ಯ ನಟನೆಯಿಂದ ಹಿಡಿದು ಆಳವಾಗಿ ಪ್ರಭಾವ ಬೀರುವ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇವರ ನಟನೆಗೆ ಇವರೇ ಸಾಟಿ. ಪುಟ್ಟ್ನಂಜ ಉಮಾಶ್ರೀ ಸಿನಿಜೀವನದ ಅತ್ತ್ಯುತಮ ಚಿತ್ರ. ಈ ಚಿತ್ರದಲ್ಲಿ 80 ವರ್ಷ ವಯಸ್ಸಿನ ಅಜ್ಜಿ ಪಾತ್ರದಲ್ಲಿ ನಟಿಸಿ, ಎಲ್ಲರೂ ಮೆಚ್ಚುಗೆ ಪಡೆದಿದ್ದರು. ನಂತರ ಮಣಿ ಚಿತ್ರದಲ್ಲಿ ಮಾಂಸ ವ್ಯಾಪಾರದಿಂದ ತನ್ನ ಮಗಳನ್ನು ಉಳಿಸಲು ಕಷ್ಟಪಟ್ಟು ಪ್ರಯತ್ನಿಸುತ್ತಿರುವ ವಯಸ್ಸಾದ ವೇಶ್ಯೆಯ ಪಾತ್ರದಲ್ಲಿ ಅಪೂರ್ವ ಅಭಿನಯ ನೀಡಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಗಮನ ಸೆಳೆದರು. ಉಮಾಶ್ರೀ ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡದ ನಟಿ ಎನಿಸಿಕೊಂಡಿದ್ದಾರೆ.

കൂടുതല്‍ കാണാം

ಅಚ್ಯುತ್ ಕುಮಾರ್

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅಚ್ಯುತ್ ಕುಮಾರ್. 2007ರಲ್ಲಿ ತೆರೆಕಂಡ 'ಆ ದಿನಗಳು' ಚಿತ್ರದ ಆಯಿಲ್ ಕುಮಾರ್ ಪಾತ್ರದಿಂದ ತಮ್ಮ ಸಿನಿಜೀವನ ಆರಂಭಿಸಿದ ಇವರು, ನಂತರ ಮೊಗ್ಗಿನ ಮನಸು, ಜೋಶ್, ನಾನು ನನ್ನ ಕನಸು ಮುಂತಾದ ವೈವಿಧ್ಯ ಚಿತ್ರಗಳಲ್ಲಿ ನಟಿಸಿದರು. 2013ರಲ್ಲಿ ತೆರೆಕಂಡ ಲೂಸಿಯಾ ಚಿತ್ರ ಇವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿತು. ಈ ಚಿತ್ರದ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದರು. ಹೀಗೆ ಹಲವಾರು ಸಿನಿಮಾಗಳಲ್ಲಿ ಭಿನ್ನ-ಭಿನ್ನ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿರುವ ಇವರು, ಯಾವ ನಾಯಕ ನಟರಿಗೂ ಕಡಿಮೆಯಿಲ್ಲ.

 

കൂടുതല്‍ കാണാം


ರಂಗಾಯಣ ರಘು

ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಟ ರಂಗಾಯಣ ರಘು. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆ. ೩೦೦ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು ಕೇವಲ ಹಾಸ್ಯ ಪಾತ್ರಗಳಲ್ಲದೇ, ಫೋಷಕ ಹಾಗೂ ನಕಾರಾತ್ಮಕ ಪಾತ್ರಗಳಲ್ಲಿಯೂ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ರಂಗಾಯಣ ರಘು, ನಂತರ ಖಳನಾಯಕನಾಗಿ ಕಾಣಿಸಿಕೊಂಡರು. ಇವರಿಗೆ ಬಿಗ್‌ ಬ್ರೇಕ್ ಕೊಟ್ಟ ಚಿತ್ರ ದುನಿಯಾ. ಈ ಚಿತ್ರದಲ್ಲಿ ತಮ್ಮ ಗಂಭೀರ ಪಾತ್ರಗಳಿಂದ ಹೊರಬಂದು ಸಂಪೂರ್ಣ ಹಾಸ್ಯ ಪಾತ್ರ ಮಾಡಿದ್ದರು. ಬಳಿಕ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಇವರು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 

 

കൂടുതല്‍ കാണാം

ರವಿಶಂಕರ್ ಪಿ

2011ರಲ್ಲಿ ಕೋಟೆ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್,  ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರದಲ್ಲಿ ಆರ್ಮುಗಂ ಪಾತ್ರದಲ್ಲಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸಕಲಕಲಾವಲ್ಲಭ ಎಂದೇ ಗುರುತಿಸಿಕೊಂಡಿದ್ದಾರೆ. ರವಿಶಂಕರ್ ಅವರ ನಟನೆಗೆ ಕನ್ನಡಿಗರು ಮನಸೋತಿದ್ದಾರೆ. ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಯಿಂದ ಬೇಡಿಕೆ ಹೊಂದಿರುವ ರವಿಶಂಕರ್, ಎಂತಹ ಪಾತ್ರಕ್ಕೂ ಜೀವ ತುಂಬುತ್ತಾರೆ. ಪುನೀತ್ ರಾಜ್​​ಕುಮಾರ್, ಯಶ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್‌ಟೈಮ್ ವಿಲನ್ ಆಗಿ ಅಬ್ಬರಿಸಿರುವ ಇವರು, ಅದ್ಭುತ ಕಲಾವಿದೆ.  

 

കൂടുതല്‍ കാണാം


ದೊಡ್ಡಣ್ಣ

ದೊಡ್ಡಣ್ಣ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ಇವರು, ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ಕುಟುಂಬದಲ್ಲಿ ಕೊನೆ ಮಗನಾಗಿ ಜನಿಸಿದ ಇವರಿಗೆ ತಮ್ಮ ತಾತನ ಹೆಸರು ಕಡ್ಲೆ ದೊಡ್ಡಪ್ಪ ಎಂದು ನಾಮಕರಣ ಮಾಡಲಾಯಿತು. ಹೆಸರಿನಂತೆ ದೈತ್ಯ ದೇಹಿಯಾಗಿ ಬೆಳೆದ ದೊಡ್ಡಣ್ಣನವರು, ನಂತರ ಕನ್ನಡ ಕಲಾಲೋಕದ ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತಿದ್ದಾರೆ. ಖಳನಟ, ಹಾಸ್ಯನಟ ಹಾಗೂ ಫೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿರುವ ಇವರು, ಸದ್ಯ ಕಿರುತೆರೆಯಲ್ಲೂ ಸಕ್ರಿಯವಾಗಿದ್ದಾರೆ. 

 

കൂടുതല്‍ കാണാം

ಸಾಧು ಕೋಕಿಲ

ತಮ್ಮ ಅದ್ಭುತ ಹಾಸ್ಯ ನಟನೆಯಿಂದ ಚಂದನವನದಲ್ಲಿ ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ಸಾಧು ಕೋಕಿಲ, ಬಹುಮುಖ ಪ್ರತಿಭೆ. ಇವರು ಸಂಗೀತ ನಿರ್ದೇಶಕನಾಗಿ ಸಿನಿಜರ್ನಿ ಆರಂಭಿಸಿದರೂ ನಟನಾಗಿ ನಿರ್ವಹಿಸಿದ ಹಾಸ್ಯ ಪಾತ್ರಗಳು ಸಾಕಷ್ಟು ಖ್ಯಾತಿ ನೀಡಿದವು. ನಂತರ ಚಿತ್ರ ನಿರ್ದೇಶನಕ್ಕೆ ಇಳಿದ ಸಾಧುಕೋಕಿಲ, ರಕ್ತ ಕಣ್ಣೀರು, ಸುಂಟರಗಾಳಿ, ಅನಾಥರು, ಶೌರ್ಯ ಮುಂತಾದ ಚಿತ್ರಗಳಿಗೆ ಆ್ಯಕ್ಸನ್ ಕಟ್ ಹೇಳಿದರು. ಇವರೊಬ್ಬ ಅದ್ಭುತ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಮಾತ್ರಲ್ಲದೇ ಅತಿ ವೇಗವಾಗಿ ಕೀಬೋರ್ಡ್ ನುಡಿಸುವಂತಹ ಭಾರತದ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 

 

കൂടുതല്‍ കാണാം


ಚಿಕ್ಕಣ್ಣ

ಚಿಕ್ಕಣ್ಣ ತೆರೆಮೇಲೆ ಕಾಣಿಸಿಕೊಂಡರೆ ಸಾಕು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗೋದು ಗ್ಯಾರಂಟಿ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ, ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿರುವ ಇವರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದವರು ಯಶ್. ಕಿರಾತಕ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚಿಕ್ಕಣ್ಣ, ತಮ್ಮ ನಟನೆಯಿಂದ ಈಗ ಕನ್ನಡ ಚಿತ್ರರಂಗದ ಬೇಡಿಕೆ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ನಾಯಕ ನಟನಾಗಿಯೂ ಅಬಿನಯಿಸುತ್ತಿದ್ದಾರೆ.  

 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+