X
ഹോം ടോപ് ലിസ്റ്റിങ്ങ്‌

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸ್ಯಾಂಡಲ್‌ವುಡ್ ನಟಿಮಣಿಯರಿವರು!

Author: Sowmya Bairappa | Published: Thursday, May 30, 2024, 11:19 AM [IST]

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಮಹಿಳಾಪ್ರಧಾನ ಸಿನಿಮಾಗಳು ಹೆಚ್ಚಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಕೇವಲ ಬಾಲಿವುಡ್‌ನಲ್ಲಿ ಮಾತ್ರ ಹೆಚ್ಚು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿದ್ದವು. ಆದರೆ, ಈಗ ಹಾಗಿಲ್ಲ, ಸ್ಯಾಂಡಲ್‌ವುಡ್‌ನಲ್ಲೂ ಮಹಿಳಾ ಪ್ರಧಾನ ಚಿತ್ರಗಳು ತೆರೆಗೆ ಬರುತ್ತಿವೆ. ಮಹಿಳೆಯರ ಯಶೋಗಾಥೆಯನ್ನು ಸಾರುವಂತಹ ಚಿತ್ರಗಳು, ಮಹಿಳಾ ಸಾಧನೆ, ಮಹಿಳೆಯರ ಮೇಲಾಗುವ ದೌರ್ಜನ್ಯ ಹೀಗೆ ಅನೇಕ ವಿಷಯಗಳ ಬಗ್ಗೆ ಸಾಕಷ್ಟು ಸಿನಿಮಾಗಳು ಕನ್ನಡದಲ್ಲೂ ತೆರೆಕಂಡಿವೆ. ಅಲ್ಲದೆ, ಇನ್ನೂ ಹಲವು ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿವೆ. ಕನ್ನಡದ ಅನೇಕ ದೊಡ್ಡ ನಟಿಮಣಿಯರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಹಿಳಾ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಲ್ಲಿ ಮಹಿಳಾಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ರಚಿತಾ ರಾಮ್

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ವಿಜಯ್ ಎಸ್ ಗೌಡ ನಿರ್ದೇಶನದ ಲಿಲ್ಲಿ, ಸತ್ಯ ರಾಯಲ ಆಕ್ಷನ್ ಕಟ್ ಹೇಳಿರುವ ಏಪ್ರಿಲ್ ಹಾಗೂ ನವೀನ್ ಶೆಟ್ಟಿ ನಿರ್ದೇಶನದ ಶಬರಿ ಸರ್ಚಿಂಗ್ ಫಾರ್ ರಾವಣ ಎಂಬ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಲವು ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ರಚಿತಾ, ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಈ ಮೂರು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.

കൂടുതല്‍ കാണാം


ಪಾರುಲ್ ಯಾದವ್

ನಟಿ ಪಾರುಲ್ ಯಾದವ್ 'ಬಟರ್ ಫ್ಲೈ' ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಬಾಲಿವುಡ್‌ನ ಸೂಪರ್ ಹಿಟ್ 'ಕ್ವೀನ್' ಚಿತ್ರದ ರಿಮೇಕ್. ಹಿಂದಿಯಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಅದೇ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಿದ್ದಾರೆ. ಹಳ್ಳಿಯ ಹುಡುಗಿಯೊಬ್ಬಳು ಹೇಗೆ ಒಂಟಿಯಾಗಿ ಜೀವನ ಮಾಡುತ್ತಾಳೆ ಎನ್ನುವ ಕತೆಯಿರುವ ಸಿನಿಮಾ 'ಬಟರ್ ಫ್ಲೈ'. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ. 


കൂടുതല്‍ കാണാം

ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ೨೦೧೯ರಲ್ಲಿ 'ದಮಯಂತಿ' ಎಂಬ ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ಸದ್ಯ 'ಭೈರಾದೇವಿ' ಎಂಬ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ದೇವಿಯ ನಾನಾ ಅವತಾರಗಳಲ್ಲಿ ಮಿಂಚಲಿದ್ದಾರೆ. 'ಭೈರಾದೇವಿ' ದುಷ್ಟರನ್ನು ಹೇಗೆ ಶಿಕ್ಷಿಸುತ್ತಾಳೆ ಎನ್ನುವ ಸಾರಾಂಶ ಹೊಂದಿರುವ ಸಿನಿಮಾವಾಗಿದ್ದು, ಶ್ರೀಜಯ್ ನಿರ್ದೇಶನ ಮಾಡುತ್ತಿದ್ದಾರೆ.


കൂടുതല്‍ കാണാം


ಪ್ರಿಯಾಂಕ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ ಮಮ್ಮಿ ಸೇವ್ ಮಿ, 1980, ಮಿಸ್ ನಂದಿನಿ, ದೇವಕಿ, ಹೌರಾ ಬ್ರಿಡ್ಜ್ ಎಂಬ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ಸದ್ಯ ಅವರು ಖೈಮರಾ ಹಾಗೂ ಕ್ಯಾಪ್ಚರ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಈ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ.  

കൂടുതല്‍ കാണാം

ಹರಿಪ್ರಿಯಾ

ನಟಿ ಹರಿಪ್ರಿಯಾ 'ಡಾಟರ್ ಆಫ್ ಪಾರ್ವತಮ್ಮ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿ ವೈದೇಹಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಮ್ಮನ ಪಾತ್ರದಲ್ಲಿ ಪಾರ್ವತಮ್ಮ ಆಗಿ ಸುಮಲತಾ ಮಿಂಚಿದ್ದರು. ತಾಯಿ ಮತ್ತು ಮಗಳ ಬಾಂಧವ್ಯದ ನಡುವೆ ಹೆಣೆದಿರುವ ಈ ಕಥೆಯಲ್ಲಿ ಮಹಿಳಾ ಜೀವನದ ಸಾಹಗಾಥೆಯೂ ಇದೆ. ಇದಾದ ಬಳಿಕ 'ಸೂಜಿದಾರ' ಎಂಬ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅಮೃತಮತಿ ಎಂಬ ಸಿನಿಮಾ ಮಾಡ್ತಿದ್ದಾರೆ.

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+