ಕನ್ನಡ ಚಿತ್ರರಂಗದ ಅಂದಾಕ್ಷಣ ತಟ್ಟನೇ ನೆನಪಾಗೋದೇ ವರನಟ ಡಾ.ರಾಜ್‌ಕುಮಾರ್. ಅಣ್ಣಾವ್ರು ಮೊದಲು ಸಣ್ಣ ಪಾತ್ರದಲ್ಲಿ ಅಭಿನಯಿಸಿ, ನಂತರವೇ ನಾಯಕನಾಗಿ ಮಿಂಚಿದವರು. ಹಲವರು ಡಾ.ರಾಜ್ ಅವರ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಅಂದುಕೊಂಡಿದ್ದಾರೆ. ಆದರೆ, ಈ ಸಿನಿಮಾಗೂ ಮೊದಲು ಅಣ್ಣಾವ್ರು ಭಕ್ತ ಪ್ರಹ್ಲಾದ (1942) ಸಿನಿಮಾದಲ್ಲಿ ಶಾಲಾ ಬಾಲಕನಾಗಿ ಒಂದು ಪುಟ್ಟ ಪಾತ್ರ ನಿರ್ವಹಿಸಿದ್ದರು. 1952ರಲ್ಲಿ ಬಿಡುಗಡೆಯಾದ ಶಂಕರ್ ಸಿಂಗ್ ನಿರ್ದೇಶನದ ''ಶ್ರೀ ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದರು. ಬಳಿಕ 1954ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ನಾಯಕನಾಗಿ ಚಂದನವನ ಪ್ರವೇಶಿಸಿದರು.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಡಾ.ರಾಜಕುಮಾರ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#dr-rajkumar
ರೆಬಲ್ ಸ್ಟಾರ್ ಅಂಬರೀಶ್ ಖಳನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದವರು. ಅವರ ಮೊದಲ ಚಿತ್ರ, ಮೊದಲ ಡೈಲಾಗ್ ಎಂದೆಂದಿಗೂ ಮೆರಯಲು ಸಾಧ್ಯವಿಲ್ಲ. 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯನ್ನ ಚುಡಾಯಿಸುವ 'ಜಲೀಲ' ಎಂಬ ಯುವಕನ ಪಾತ್ರದಲ್ಲಿ ಅಂಬರೀಶ್ ಮಿಂಚಿದ್ದರು. 'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ....' ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ. ಬಳಿಕ ಕೆಲ ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಅಂಬಿ, ನಂತರ ಚಂದನವನ ಸ್ಟಾರ್ ನಟನಾಗಿ ಮಿಂಚಿದರು.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಅಂಬರೀಶ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#ambareesh
ನಟ ಟೈಗರ್ ಪ್ರಭಾಕರ್ ಆರಂಭದಲ್ಲಿ ವಿಲನ್, ಹಾಸ್ಯ ಹಾಗೂ ಎರಡನೇ ನಾಯಕನ ಪಾತ್ರಗಳಲ್ಲಿ ಅಭಿನಯಿಸಿ, ನಂತರದ ದಿನಗಳಲ್ಲಿ ತಮ್ಮದೇಯಾದ ಇಮೇಜ್‌ವೊಂದನ್ನು ಸೃಷ್ಟಿಸಿಕೊಂಡು ಬಳಿಕ ನಾಯಕನಾಗಿ ಮಿಂಚಿದರು. ಅಂದಹಾಗೆ ಅವರು ಮೊದಲ ಸಿನಿಮಾ ಕಾಡಿನ ರಹಸ್ಯ. ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುವ ಮೂಲಕ ಚಂದನವನ ಪ್ರವೇಶಿಸಿದರು.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಟೈಗರ್ ಪ್ರಭಾಕರ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#tiger-prabhakar
ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್, 1982ರಲ್ಲಿ ನಿರ್ದೇಶಕ ಕೆ.ವಿ ರಾಜು ಮತ್ತು ರಾಜಕಿಶೋರ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು. ಬಳಿಕ ಇಬ್ಬನಿ ಕರಗಿತು ಎಂಬ ಚಿತ್ರದಲ್ಲಿ ಸಣ್ಣಪಾತ್ರ ನಿರ್ವಹಿಸುವ ಮೂಲಕ ನಟನಾಗಿ ಎಂಟ್ರಿಕೊಟ್ಟರು. ಬಳಿಕ ರಣಧೀರ, ಸಾಂಗ್ಲಿಯಾನ, ರಣರಂಗ, ಯುದ್ಧಕಾಂಡ, ಪರಶುರಾಮ್, ರಾಣಿ ಮಹಾರಾಣಿ, ಸೋಲಿಲ್ಲದ ಸರದಾರ ಚಿತ್ರಗಳಲ್ಲಿ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. 1992ರಲ್ಲಿ `ಭಂಡ ನನ್ನ ಗಂಡ' ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಇವರು, ಅದೇ ವರ್ಷ ತೆರೆಕಂಡ `ತರ್ಲೆ ನನ್ಮಗ' ಚಿತ್ರದ ಮೂಲಕ ಬಿಗ್ ಬ್ರೇಕ್ ಪಡೆದರು.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಜಗ್ಗೇಶ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#jaggesh
ಸ್ಯಾಂಡಲ್‌ವುಡ್ ಕಜನಪ್ರಿಯ ನಟರಲ್ಲಿ ಶಶಿಕುಮಾರ್ ಕೂಡ ಒಬ್ಬರು. ಇವರು ನಾಯಕನಾಗುವ ಮುನ್ನ ಖಳನಟ ಹಾಗೂ ಫೋಷಕ ನಟನಾಗಿ ಅಭಿನಯಿಸಿದರು. `ಚಿರಂಜೀವಿ ಸುಧಾಕರ್' ಇವರ ನಟನೆಯ ಮೊದಲ ಸಿನಿಮಾದ,. ಈ ಚಿತ್ರದಲ್ಲಿ ಖಳನಾಯಕನಾಗಿ ಬಣ್ಣಹಚ್ಚಿದ್ದರು.
1990ರಲ್ಲಿ ತೆರೆಕಂಡ `ಬಾರೇ ನನ್ನ ಮುದ್ದಿನ ರಾಣಿ' ಚಿತ್ರದಿಂದ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಇವರು, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ಇವರ ಮಗ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಶಶಿಕುಮಾರ್ (ಬಿಗ್ ಬಾಸ್)
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#shashi-kumar
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚರಣ್ ರಾಜ್ ಮತ್ತು ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ 'ತಾಯವ್ವ' ಚಿತ್ರದಲ್ಲಿ ಎರಡನೇ ನಾಯಕನ ಪಾತ್ರ ನಿರ್ವಹಿಸುವ ಮೂಲಕ ಚಂದನವನ ಪ್ರವೇಶಿಸಿದರು. ನಂತರ 1999ರಲ್ಲಿ ಪ್ರತ್ಯಾರ್ಥ ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದರು. ತದನಂತರ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ 'ಸ್ಪರ್ಶ' ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿಕೊಟ್ಟರು. ಆದರೆ, 2001ರಲ್ಲಿ ತೆರೆಕಂಡ 'ಹುಚ್ಚ' ಸಿನಿಮಾ ಸುದೀಪ್‌ಗೆ ಬಿಗ್ ಬ್ರೇಕ್ ನೀಡಿತು. ಈ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಕಿಚ್ಚ. ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಅವರನ್ನು ಅಭಿಮಾಗಳು ಕಿಚ್ಚ ಎಂದು ಕರೆಯಲಾರಂಭಿಸಿದರು. ಇದೀಗ ಸುದೀಪ್ 'ಕಿಚ್ಚ ಸುದೀಪ್' ಎಂದೇ ಪ್ರಸಿದ್ಧರಾಗಿದ್ದಾರೆ.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಸುದೀಪ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#sudeep
ನಟ ದುನಿಯಾ ವಿಜಯ್ ಅವರ ಸಿನಿಜರ್ನಿಯೇ ಸ್ಫೂರ್ತಿದಾಯಕ. ಬಡ ಕುಟುಂಬದಲ್ಲಿ ಬೆಳೆದ ವಿಜಿ, ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಚಿಕ್ಕ-ಪುಟ್ಟ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ವಿಜಯ್, ಜೋಗಿ, ರಂಗ ಎಸ್ಎಎಸ್‌ಎಲ್‌ಸಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು. 2007ರಲ್ಲಿ ಸೂರಿ ನಿರ್ದೇಶನದ 'ದುನಿಯಾ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ಇವರು, ಮೊದಲ ಚಿತ್ರದಲ್ಲೇ ಸೂಪರ್ ಸಕ್ಸಸ್ ಕಂಡರು. ಸದ್ಯ ಸ್ಯಾಂಡಲ್‌ವುಡ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ವಿಜಿ, ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ದುನಿಯಾ ವಿಜಯ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#duniya-vijay
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟೈಮ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್, `ಟಪೋರಿ' ಎಂಬ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಕೆಲ ಸಿನಿಮಾಗಳಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದ ಗಣೇಶ್, `ಚೆಲ್ಲಾಟ' ಚಿತ್ರದ ಮೂಲಕ ನಾಯಕನಾಗಿ ಸಿನಿಜರ್ನಿ ಆರಂಭಿಸಿದರು. ಸದ್ಯ ಚಂದನವನದ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಗಣೇಶ್
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#ganesh
2010ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟಿದ್ದ ರಿಷಬ್ ಶೆಟ್ಟಿ ನಾಯಕನಾಗಿದ್ದು 2019ರಲ್ಲಿ. 2010ರಲ್ಲಿ 'ನಮ್ ಏರಿಯಾದಲ್ಲಿ ಒಂದಿನ' ಎಂಬ ಸಿನಿಮಾದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ನಟಿಸಿದ್ದರು. ನಂತರ ರಕ್ಷಿತ್ ಅಭಿನಯದ ತುಗಲಕ್ ಸಿನಿಮಾದಲ್ಲಿಯೂ ಹೆಸರಿಲ್ಲದ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಅಟ್ಟಹಾಸ, ಲೂಸಿಯಾ, ಉಳಿದವರು ಕಂಡಂತೆ. ರಿಕ್ಕಿ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸಹನಟನಾಗಿ ಅಭಿನಯಿಸಿದ್ದ ರಿಷಭ್, 2019ರಲ್ಲಿ ಕಥಾನಾಐಕ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಇವರು, ಇಂದು ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ರಿಷಭ್ ಶೆಟ್ಟಿ
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#rishab-shetty
ಕಿರುತೆರೆಯಲ್ಲಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ನಟ ಶ್ರೀನಗರ ಕಿಟ್ಟಿ `ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಗಿರಿ. ನಂತರ ನಾಯಕನಾಗಿ ಇನ್ನಿಂಗ್ಸ್ ಆರಂಭಿಸಿದ ಇವರು ಇಂದು ಚಂದನವನದ ಪ್ರಮುಖ ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರ ಜೊತೆ ನಟ ದೇವರಾಜ್, ಲೂಸ್‌ಮಾದ ಯೋಗಿ, ಸಾಯಿಕುಮಾರ್, ಜೈ ಜಗದೀಶ್, ರಮೇಶ್ ಅರವಿಂದ್, ಅನಿರುದ್ಧ್ ಮುಂತಾದವರು ಸಹನಟರಾಗಿಯೇ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದು.
കൂടുതല് കാണാം
ಡಾ.ರಾಜ್‌ಕುಮಾರ್ To ರಿಷಭ್ ಶೆಟ್ಟಿ: ಸಹನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ನಾಯಕರಾಗಿ ಮಿಂಚಿದ ನಟರಿವರು!-ಶ್ರೀನಗರ ಕಿಟ್ಟಿ
/top-listing/dr-rajkumar-to-rishab-shetty-sandalwood-actors-who-climbed-from-supporting-roles-to-superstardom-3-3252.html#srinagara-kitty
LOADING......