ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟ ಕಿರಣ್ ರಾಜ್, ಡಿಜೆ ಹಾಗೂ ರೈಫಲ್ ಶೂಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಇವರ ಮನೆಯಲ್ಲೂ ಡಿಜೆ ಸೆಟ್ ಕಾಣಬಹುದು. ಹಿಂದಿಯಲ್ಲಿ ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ಕಿರಣ್, ಕನ್ನಡದಲ್ಲಿ ದೇವತೆ, ಕಿನ್ನರಿ, ಕನ್ನಡತಿ ಮುಂತಾದ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಜೊತೆಗೆ ಮಾರ್ಚ್ 22, ಅಸತೋಮ ಸದ್ಗಮಯ, ಜೀವ್ನಾನೇ ನಾಟ್ಕ ಸ್ವಾಮಿ , ಭರ್ಜರಿ ಗಂಡು, ಬಡ್ಡೀಸ್, ರಾನಿ ಮುಂತಾದ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಕಿರಣ್ ರಾಜ್
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಕಿರಣ್-ರಾಜ್
ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಕಿನ್ನರಿ ಮೂಲಕ ಮನೆಮಾತಾಗಿರುವ ಭೂಮಿಕಾ ಶೆಟ್ಟಿ ನಟಿ ಮಾತ್ರವಲ್ಲ, ಯಕ್ಷಗಾನ ಕಲಾವಿದೆ ಕೂಡ ಹೌದು. ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ಇವರು, ಯಕ್ಷಗಾನವನ್ನು ಅದ್ಭುತವಾಗಿ ಮಾಡುತ್ತಾರೆ. ನಟನೆಗೆ ಕಾಲಿಡುವ ಮುನ್ನ ಇವರು ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಭೂಮಿಕಾ ಶೆಟ್ಟಿ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಭೂಮಿಕಾ-ಶೆಟ್ಟಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿ ತನ್ವಿ ರಾವ್ ಭರತನಾಟ್ಯ, ಕಥಕ್ ಕಲಾವಿದೆ. ತಮ್ಮ 4ನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಯಲು ಆರಂಭಿಸಿದ ಇವರು, ದೆಹಲಿ ದೂರದರ್ಶನದ 'ಧಿನಕ್ ಧಿನ್ ಧಾ' ಹಾಗೂ ಮುಂಬೈ ದೂರದರ್ಶನದ 'ಧಮ್ ಧಮಾ ಧಮ್' ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ದರು. ತಮ್ಮ 9ನೇ ವಯಸ್ಸಿನಲ್ಲೇ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರಿಂದ 'ಅಪೂರ್ವ ಬಾಲ ಪ್ರತಿಭೆ' ಪ್ರಶಸ್ತಿ ಪಡೆದಿದ್ದರು. ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ 10ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯಪಾಲರಿಂದ 'ಕರ್ನಾಟಕ ರಾಜ್ಯ' ಪ್ರಶಸ್ತಿ ಪಡೆದಿದ್ದರು. ಡಾ. ಎಪಿಜೆ ಅಬ್ದುಲ್ ಕಲಾಂ, ಉದಿತ್ ನಾರಾಯಣ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಕದ್ರಿ ಗೋಪಾಲನಾಥ್, ಅಂಜಲಿ ತೆಂಡೂಲ್ಕರ್ ಅವರುಗಳಿಂದ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ತನ್ವಿ ರಾವ್
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ತನ್ವಿ-ರಾವ್
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಮಾಡುತ್ತಿರುವ ನಟಿ ಚಂದನಾ ಅನಂತಕೃಷ್ಣ ಬಹುಮುಖ ಪ್ರತಿಭೆ. ಇವರು ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಗಾಯಕಿ. ಕಥಕ್ ಹಾಗೂ ಭರತನಾಣ್ಯವನ್ನು ಅದ್ಭುವಾಗಿ ಮಾಡುತ್ತಾರೆ. ಜೊತೆಗೆ ಗಾಯನದಲ್ಲೂ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಚಂದನಾ ಅನಂತಕೃಷ್ಣ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಚಂದನಾ-ಅನಂತಕೃಷ್ಣ
ಕನ್ನಡದ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ತಬಲಾ ಕಲಾವಿದ. ತಬಲಾವನ್ನು ಅದ್ಭುವಾಗಿ ನುಡಿಸುವ ಇವರು, ಶಾಲಾ-ಕಾಲೇಜು ದಿನಗಳಲ್ಲಿ ಇದನ್ನೇ ಪಾರ್ಟ್‌ಟೈಮ್ ಜಾಬ್ ಆಗಿ ಮಾಡಿಕೊಂಡಿದ್ದರಂತೆ. ಈ ಬಗ್ಗೆ ಸ್ವತಃ ಅವತೇ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದರು. ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ಇವರು, ಸದ್ಯ ನಿರೂಪಣೆಯಲ್ಲೇ ಮೋಡಿ ಮಾಡುತ್ತಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ನಿರಂಜನ್ ದೇಶಪಾಂಡೆ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ನಿರಂಜನ್-ದೇಶಪಾಂಡೆ
ಕುಲವಧು, ಸೇವಂತಿ ಸೇವಂತಿ ಸೀರಿಯಲ್‌ಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟ ಶಿಶಿರ್ ಶಾಸ್ತ್ರಿ ಫ್ರೊಪೆಶನಲ್ ಭರತನಾಟ್ಯ ಕಲಾವಿದ ಅನ್ನೋದು ಹಲವರಿಗೆ ತಿಳಿದಿಲ್ಲ. ಇವರು ಧಾರಾವಾಹಿ ಮಾತ್ರವಲ್ಲದೇ, ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಶಿಶಿರ್ ಶಾಸ್ತ್ರೀ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಶಿಶಿರ್-ಶಾಸ್ತ್ರೀ
ಕಿರುತೆರೆ ಮತ್ತು ಕಿರುತೆರೆಯಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ನಟ ಶ್ರೀ ಮಹಾದೇವ್ ಗಿಟಾರ್ ಅನ್ನು ಅದ್ಭುತವಾಗಿ ನುಡಿಸುತ್ತಾರೆ. ಆಗಾಗ ತಾವು ಗಿಟಾರ್ ನುಡಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಅವರು ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಶ್ರೀ ಮಹಾದೇವ್
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಶ್ರೀ-ಮಹಾದೇವ್
ತಮ್ಮ ನಿರೂಪಣೆ ಮೂಲಕ ಜನಮನಗೆದ್ದಿರುವ ಅಕುಲ್ ಬಾಲಾಜಿ ಕೂಡ ಬಹುಮುಖ ಪ್ರತಿಭೆ. ಇವರು ಭರತನಾಟ್ಯ, ಕಥಕ್ ಹಾಗೂ ಕಂಟೆಂಪರರಿ ಡ್ಯಾನ್ಸ್ ಅದ್ಭುತವಾಗಿ ಮಾಡುತ್ತಾರೆ. ನಿರೂಪಣೆ ಜೊತೆಗೆ ಕೆಲ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲೂ ಅಕುಲ್ ಬಾಲಾಜಿ ಅಭಿನಯಿಸಿದ್ದಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ಅಕುಲ್ ಬಾಲಾಜಿ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ಅಕುಲ್-ಬಾಲಾಜಿ
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ವೈಷ್ಣವಿ ಗೌಡ, ಭರನಾಟ್ಯ ಹಾಗೂ ಬೆಲ್ಲಿ ಡ್ಯಾನ್ಸರ್ ಕೂಡ ಹೌದು. ಆಗಾಗ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
കൂടുതല് കാണാം
ನಟನೆ ಮಾತ್ರವಲ್ಲ, ಈ ಕಿರುತೆರೆ ಕಲಾವಿದರಿಗಿರುವ ಸ್ಪೆಷಲ್ ಟ್ಯಾಲೆಂಟ್ ಬಗ್ಗೆ ನಿಮಗೆ ಗೊತ್ತಾ?-ವೈಷ್ಣವಿ ಗೌಡ
/top-listing/from-akul-balaji-to-tanvi-raocelebs-whose-talent-goes-beyond-just-acting-3-4640.html#ವೈಷ್ಣವಿ-ಗೌಡ
LOADING......