X
ഹോം ടോപ് ലിസ്റ്റിങ്ങ്‌

ರಕ್ಷಿತಾ ಟು ಅದಿತಿ ಪ್ರಭುದೇವ: ಈ ಸ್ಯಾಂಡಲ್‌ವುಡ್ ನಟಿಮಣಿಯರ ಮೊದಲ ಹೆಸರು ಏನಾಗಿತ್ತು ಗೊತ್ತಾ?

Author: Sowmya Bairappa | Published: Monday, September 16, 2024, 04:33 PM [IST]

ಕನ್ನಡದ ಹಲವು ಜನಪ್ರಿಯ ನಟಿಯರು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡುವುದಕ್ಕಾಗಿ ತಮ್ಮ ಹಳೆಯ ಹೆಸರು ಬದಲಾಯಿಸಿಕೊಂಡಿದ್ದರು. ತಮ್ಮ ಮೂಲ ಹೆಸರಿನ ಬದಲು ಸಿನಿಮಾಕ್ಷೇತ್ರಕ್ಕೆ ಆಕರ್ಷಕವೆನಿಸುವ ಹೆಸರಿನೊಂದಿಗೆ ನಟನೆ ಆರಂಭಿಸಿದ್ದಾರೆ. ಇನ್ನೂ ಕೆಲ ನಟಿಯರು ವಿವಿಧ ಕಾರಣಗಳಿಂದ ಹೆಸರು ಬದಲಾಯಿಸಿಕೊಂಡಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್ ನಟಿಯರ ಮೂಲ ಹೆಸರು ಏನು ಎಂಬ ಮಾಹಿತಿಯ್ನು ನೀಡಲಾಗಿದೆ.

Share:
cover image
ರಕ್ಷಿತಾ

ನಟಿ ರಕ್ಷಿತಾ ಅವರ ಹೆಸರು ಮೊದಲು ಶ್ವೇತಾ ಎಂಬುದಾಗಿತ್ತು.  ಶ್ವೇತಾ ಆಗಿದ್ದವರು ರಕ್ಷಿತಾ ಆಗಿದ್ದು ಅಪ್ಪು ಸಿನಿಮಾ ಮೂಲಕ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದು ರಕ್ಷಿತಾ. 2002, ಏಪ್ರಿಲ್ 26ರಂದು ತೆರೆಗೆ ಬಂದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಅಲ್ಲಿಂದ ಮುಂದೆ ರಕ್ಷಿತಾ ಕನ್ನಡದ ಜನಪ್ರಿಯ ನಟಿಯಾದರು. 

കൂടുതല്‍ കാണാം


ಸುಧಾರಾಣಿ

ಸುಧರಾಣಿ ಅವರು 'ಜಯಶ್ರೀ' ಹೆಸರಿನಿಂದ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಇವರಿಗೆ ಸುಧಾರಾಣಿ ಎಂಬ ಹೆಸರು ನೀಡಿ, ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಸಿನಿರಂಗಕ್ಕೆ ಪರಿಚಯ ಮಾಡಿದರು. 1986ರಲ್ಲಿ ತೆರೆಕಂಡ 'ಆನಂದ್' ಚಿತ್ರದಲ್ಲಿ  ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ನಾಯಕ-ನಾಯಕಿಯಾಗಿ ನಟಿಸಿದರು. ಇಬ್ಬರಿಗೂ ಇದು ಮೊದಲ ಸಿನಿಮಾ. ಆನಂದ್ ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸುಧಾರಾಣಿ ಹಾಗೂ ಶಿವರಾಜ್‌ಕುಮಾರ್ ಅಂದಿನ ಕಾಲದ ಟ್ರೆಡಿಂಗ್ ಅನ್‌ ಸ್ಕ್ರೀನ್ ಜೋಡಿಯಾಗಿ ಮಿಂಚಿದರು. 

കൂടുതല്‍ കാണാം

ರಮ್ಯಾ

2003ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ. ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ದಿವ್ಯ ಸ್ಪಂದನ ಅವರಿಗೆ ಅಭಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿ, ಈ ಚಿತ್ರದಲ್ಲಿ ಅವರ ಹೆಸರನ್ನು ರಮ್ಯ ಎಂದು ಬದಲಾಯಿಸಿದರು.


കൂടുതല്‍ കാണാം


ಆದಿತಿ ಪ್ರಭುದೇವ

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೇವಲ ನಟನೆಯಿಂದ ಮಾತ್ರವಲ್ಲದೇ, ತಮ್ಮ ಸರಳ ನಡೆನುಡಿಯಿಂದ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ. ಅಂದ್ಹಾಗೆ ಈ ನಟಿಯ ಮೊದಲ ಹೆಸರು ಸುದೀಪನ ಎಂಬುದಾಗಿತ್ತು. ಆದರೆ, ಈ ಹೆಸರು ವಿಭಿನ್ನವಾಗಿದ್ದರಿಂದ ಕೆಲವರು ಅದಿತಿಯನ್ನು ಸುದೀಪಣ್ಣ, ಸುದೀಪ ಎನ್ನುತ್ತಿದ್ದರಂತೆ. ಹೀಗಾಗಿ, ಸುದೀಪನ ತಮ್ಮ ಹೆಸರನ್ನು 'ಅದಿತಿ ಪ್ರಭುದೇವ' ಎಂದು ಬದಲಿಸಿಕೊಂಡರಂತೆ. 

കൂടുതല്‍ കാണാം

ಪೂಜಾ ಗಾಂಧಿ

ನಟಿ ಪೂಜಾ ಗಾಂಧಿ ಮೂಲ ಹೆಸರು ಸಂಜನಾ ಗಾಂಧಿ. ಪೂಜಾ ಗಾಂಧಿ ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆಕಾಲಿಟ್ಟಿದ್ದರು. ಇದೀಗ ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ.

കൂടുതല്‍ കാണാം


ರಚಿತಾ ರಾಮ್

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್. ಕನ್ನಡ ಕಿರುತೆರೆಯಲ್ಲಿ ಬಿಂದಿಯಾ ರಾಮ್ ಆಗಿ ಚಿರಪರಿಚಿತರಾಗಿದ್ದ ರಚಿತಾ, ಬುಲ್‌ಬುಲ್ ಸಿನಿಮಾ ಮೂಲಕ ಹೆಸರು ಬದಲಿಸಿಕೊಂಡು ಚಂದನವನ ಪ್ರವೇಶಿಸಿದರು. ಇಂದು ಕನ್ನಡದ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. 


കൂടുതല്‍ കാണാം

ಶೃತಿ

ನಟಿ ಶ್ರುತಿ ಅವರ ಮೊದಲ ಹೆಸರು ಗಿರಿಜಾ. ಮೊದಲ ಬಾರಿಗೆ ಕನ್ನಡದ 'ಶೃತಿ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಆದಾದ ಬಳಿಕ ತಮ್ಮ ಮೂಲ ಹೆಸರು ಗಿರಿಜಾ ಬದಲು ಶ್ರುತಿ ಎಂಬ ಹೆಸರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಚಿತ್ರರಂಗದಲ್ಲೂ ಶ್ರುತಿ ಎಂದೇ ಫೇಮಸ್‌ ಆದರು.

കൂടുതല്‍ കാണാം


ಮಾಲಾಶ್ರೀ

ಕನಸಿನ ರಾಣಿ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ ಸಿನಿಮಾರಂಗದ ಜರ್ನಿ ತುಂಬಾ ದೊಡ್ಡದು. ಪುಟ್ಟ ಹುಡುಯಾಗಿದ್ದಾಗಲೇ ಮಾಲಾಶ್ರೀ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಹುಟ್ಟಿದ ಹೆಸರು 'ಶ್ರೀ ದುರ್ಗಾ'. ಬಳಿಕ ತಮ್ಮ ಹೆಸರನ್ನು ಮಾಲಾಶ್ರೀಯಾಗಿ ಬದಲಿಸಿಕೊಂಡರು.


കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+